ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

ತುಮಕೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ಕಾಂಗ್ರೆಸ್ ಸರ್ಕಾರ ಅಂದರೆ ಟಿಪ್ಪು ಸರ್ಕಾರ. ಕಾಂಗ್ರೆಸ್ ಸರ್ಕಾರ ಅಂದರೆ ಔರಂಗಜೇಬ್ ಸರ್ಕಾರ. ಇಂತಹ ಭ್ರಷ್ಟ ಹಿಂದೂ ವಿರೋಧಿ ರಾಜಕಾರಣಿಗಳನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮಾತು ತೆಗೆದೆರೆ ಗ್ಯಾರಂಟಿ ಎಂದು ಹೇಳ್ತಾರೆ. ಸಾಬ್ರಿಗೆ ಕಾಂಟ್ರಾಂಕ್ಟ್, ಸಾಬ್ರಿಗೆ ಮೀಸಲಾತಿ. ಸಾಬ್ರು ಪಾಳ್ಯಗಳ ಅಭಿವೃದ್ಧಿ. ಪ್ರವಾದಿ ಅಂದರೆ ಶಾಂತಿ ದೂತ, ಮದ್ದೂರಿನಲ್ಲಿ ಕಲ್ಲು ಹೊಗೆದವರು ಯಾರು ಸಿದ್ದರಾಮಣ್ಣ.? ಪಾಕಿಸ್ತಾನದ ಧ್ವಜ ಹಾರಿಸೋರು ಯಾರು ಸಿದ್ದರಾಮಣ್ಣ.? ಈದ್ ಮಿಲಾದ್ ಹಬ್ಬದಲ್ಲಿ ಯಾವ ಒಬ್ಬನಾದರೂ ಹಿಂದೂಗಳು ಎಲ್ಲಾದರೂ ಕಲ್ಲು ಎಸೆದಿದ್ದಾರಾ.? ನೀವ್ಯಾಕೆ ಕಲ್ಲಾಕುತ್ತೀರಾ? ಮದ್ದೂರಿನಲ್ಲಿ 70ನೇ ಕೇಸ್ ಹಾಕಿದ್ದಾರೆ. ತುಮಕೂರಿನಲ್ಲಿ 71ನೇ ಕೇಸ್ ಹಾಕ್ತಾರೆ. ಈ ದೇಶದ ಅನ್ನ, ನೀರು, ಗಾಳಿ ಪಡೆದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತೀರಾ? ಪಾಕಿಸ್ತಾನದ ಜಿಂದಾಬಾದ್ ಅಂದವರಿಗೆ ಗುಂಡು ಹಾಕಬೇಕು. ಪ್ರಪಂಚದ ಜಪಾನ್, ಜರ್ಮನ್, ಫ್ರಾನ್ಸ್ ನಲ್ಲಿ ಶಾಂತಿ ಇಲ್ಲ, ಅಮೆರಿಕ, ಬಾಂಗ್ಲಾದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಈ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮದ್ದೂರಿನಲ್ಲಿ ಜನ ಪ್ರೀತಿ ವಿಶ್ವಾಸ ತೋರಿ ಹಿಂದೂಗಳ ಪರವಾಗಿ ನೀವು ಸಿಎಂ ಆಗಬೇಕು ಅಂತ ಹೇಳಿದ್ರು. ನಾನು ಮುಖ್ಯಮಂತ್ರಿ ಆದರೇ ಮಾಡುವ ಮೊದಲ ಕೆಲಸ. ಭ್ರಷ್ಟ ಮುಕ್ತ ಸರ್ಕಾರ. ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಅಲ್ಲೇ ಢಂ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಿಲ್ಲ. ಕಾಫೀರ್ ರನ್ನು ಹೊಡೆದರ ಜೆನ್ನತ್ ಸಿಗತ್ತೆ ಅಂತಾರೆ.. ಪಾಕಿಸ್ತಾನ ಜಿಂದಾಬಾದ್ ಅನ್ನೋನಿಗೆ ಜನ್ನತ್ ಕಳಿಸಿದ್ರೆ, ನಮಗೆ ಕೈಲಾಸ, ವೈಕುಂಠ ಸಿಗುತ್ತೆ ಎಂದು ಹೇಳಿದರು.













