26.2 C
Udupi
Friday, June 5, 2026
spot_img
spot_img
HomeBlogದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು : ಡಾ. ಸುಧಾಕರ್ ಶೆಟ್ಟಿ

ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು : ಡಾ. ಸುಧಾಕರ್ ಶೆಟ್ಟಿ

ಅಜೆಕಾರು ಜ್ಞಾನಸುಧಾ: “ದೇಶಸುಧಾ” ಸೇನೆಗೆ ಒಂದು ಲಕ್ಷ ರೂ. ಹಸ್ತಾಂತರದ ಮೂಲಕ ಮಾಲಿಕೆ ಪ್ರಾರಂಭ

ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ
ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟçಮೊದಲು
ಎಂಬ ಭಾವ ನಮ್ಮೊಳಗೆ ಮೊಳಗಲು ಸಾಧ್ಯವಿದೆ ಎಂದು
ಕರ್ನಾಟಕ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್
ಗಣೇಶ್ ಕಾರ್ಣಿಕ್ ಹೇಳಿದರು.


ಅವರು ಅಜೆಕಾರಿನ ಪದ್ಮನಗರದ ಅಜೆಕಾರು
ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ
ಅಜೆಕಾರ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಅರ್ಪಿಸುವ
ತಿಂಗಳ ಸರಣಿ ಮಾಲಿಕೆ ‘ದೇಶಸುಧಾ’ವನ್ನು
ಭಾರತೀಯ ಸೇನೆಗೆ ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಒಂದು ಲಕ್ಷ
ರೂಪಾಯಿಯನ್ನು ಸಂಸ್ಥೆಯ ಎನ್.ಸಿ.ಸಿ ಲೆ. ಮಂಜುನಾಥ್
ಮುದೂರು ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ
ಮಾತನಾಡಿದರು.
ದೇಶಸುಧಾದ ಮೊದಲ ಮಾಲಿಕೆಯಲ್ಲಿ ಕ್ಯಾಪ್ಟನ್
ಗಣೇಶ್ ಕಾರ್ಣಿಕ್‌ರವರು ‘ಬಾಗಲಕೋಟೆಯ
ರಂಗಪ್ಪ ಆಲೂರರ ದೇಶಪ್ರೇಮ’ ಎಂಬ ವಿಷಯದ
ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ರಂಗಪ್ಪ ಆಲೂರ
ಯಶೋಗಾಥೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿಉಪಸ್ಥಿತರಿದ್ದ ಅಜೆಕಾರ್
ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು
ದೇಶಸುಧಾದ ಮಾರ್ಗದರ್ಶಕರು ಆಗಿರುವಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ, ದೇಶಕ್ಕಾಗಿ
ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೀರ
ಯೋಧರ ತ್ಯಾಗ ಸ್ಮರಣೀಯ. ದೇಶಪ್ರೇಮಿಗೆ
ಉಸಿರಿಗಿಂತ ದೇಶ ದೊಡ್ಡದು. ಮುಂದಿನ ಪ್ರಜೆಗಳಾದ
ಇಂದಿನ ಮಕ್ಕಳಿಗೆ ರಾಷ್ಟçಭಕ್ತಿಯ ಚೇತನವನ್ನು
ಪ್ರೇರಣೆ ನೀಡಬೇಕೆನ್ನುವುದು ನಮ್ಮ
ಆಶಯವಾಗಿದೆ. ವಿದ್ಯಾರ್ಥಿಗಳು ದೇಶಪ್ರೇಮಿಯಾಗಿ
ಬೆಳೆಯುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ
ಕರ್ತವ್ಯವಾಗಿರುತ್ತದೆ. ಇದಕ್ಕೆ ಜ್ಞಾನಸುಧಾ ಸದಾ
ಬದ್ಧವಾಗಿದೆ ಎಂದು ನುಡಿದರು.
ಕಾರ್ಕಳ ಜ್ಞಾನಸುಧಾದಲ್ಲಿಯೂ ಸಂಸ್ಕೃತಿ, ಸಂಸ್ಕಾರ,
ಸದ್ವಿಚಾರದ ಆಶಯದಡಿ ಪ್ರಸ್ತುತಗೊಳ್ಳುತ್ತಿರುವ
ತಿಂಗಳ ಸರಣಿಮಾಲಿಕೆ ಮೌಲ್ಯಸುಧಾ ತನ್ನ ಸುವರ್ಣ
ಸಂಚಿಕೆಯ ಹೊಸ್ತಿಲಿಗೆ ಕಾಲಿಟ್ಟಿರುವುದನ್ನು ಇಲ್ಲಿ
ಸ್ಮರಿಸಿಕೊಳ್ಳ ಬಹುದು
.


ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀ ಅನಿಲ್ ಕುಮಾರ್
ಜೈನ್, ಸಿ.ಎ ನಿತ್ಯಾನಂದ ಪ್ರಭು, ವಿದ್ಯಾವತಿ ಎಸ್ ಶೆಟ್ಟಿ ಹಾಗೂ
ಡಾ. ಗಗನ್ ಎಸ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ
ಶಾಂತಿರಾಜ್ ಹೆಗ್ಡೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಪ್ರಾAಶುಪಾಲರು, ಉಪಪ್ರಾಂಶುಪಾಲರುಗಳು ಸಹಿತ
ಬೊಧಕ ಬೋಧಕೇತರ ಸಿಬ್ಬಂದಿವರ್ಗ
ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಕು.ದರ್ಶಿನಿ
ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page