33.4 C
Udupi
Thursday, April 30, 2026
spot_img
spot_img
HomeBlogದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ : ನಾಳೆ ಬಾನು ಆಯ್ಕೆಯನ್ನು ಸಮರ್ಥಿಸಿಕೊಳ್ಳಲಿರುವ ರಾಜ್ಯದ...

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ : ನಾಳೆ ಬಾನು ಆಯ್ಕೆಯನ್ನು ಸಮರ್ಥಿಸಿಕೊಳ್ಳಲಿರುವ ರಾಜ್ಯದ ಲೇಖಕಿಯರು

ಬೆಂಗಳೂರು: ರಾಜ್ಯದಲ್ಲಿ ಮೈಸೂರು ದಸರಾ ಉದ್ಘಾಟನೆ ಮಾಡಲು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದ್ದು ಇದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ ಸಿಂಹ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಇದೀಗ ಬಾನು ಮುಷ್ತಾಕ್‌ಗೆ ಬೆಂಬಲವಾಗಿ ಕನ್ನಡ ಸಾಹಿತ್ಯ ಮತ್ತು ಹೋರಾಟದ ವಲಯದ ಪ್ರಮುಖ ಲೇಖಕಿಯರು ಒಗ್ಗಟ್ಟಿನಿಂದ ನಿಂತಿದ್ದು ನಾಳೆ ಬೆಳಿಗ್ಗೆ 12:30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಈ ಲೇಖಕಿಯರು ಸುದ್ದಿಗೋಷ್ಠಿಯಲ್ಲಿ ಬಾನು ಮುಷ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ.

ಡಾ ವಸುಂಧರಾ ಭೂಪತಿ, ಡಾ ಸುನಂದಮ್ಮ, ಡಾ ಪೂರ್ಣಿಮಾ, ಅಕ್ಕೈ ಪದ್ಮಶಾಲಿ ಮತ್ತು ಡಾ ಎನ್ ಗಾಯತ್ರಿ ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದು ಕನ್ನಡ ಸಾಹಿತ್ಯದಲ್ಲಿ ಬಾನು ಮುಷ್ತಾಕ್‌ರ ಕೊಡುಗೆ, ಸಾಮಾಜಿಕ ಹೋರಾಟದಲ್ಲಿ ಅವರ ಪಾತ್ರ ಮತ್ತು ದಸರಾ ಉದ್ಘಾಟನೆಗೆ ಅವರ ಆಯ್ಕೆಯ ಸಮಂಜಸತೆಯನ್ನು ಈ ಲೇಖಕಿಯರು ತಿಳಿಸಲಿದ್ದಾರೆ.

ಸದ್ಯ ಈ ವಿವಾದದಿಂದ ದಸರಾ ಉದ್ಘಾಟನೆ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ನಾಳೆ ನಡೆಯುವ ಲೇಖಕಿಯರ ಸುದ್ದಿಗೋಷ್ಠಿಯಲ್ಲಿ ಏನಾಗಲಿದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page