
ಅಹಿಂಸಾ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಕುರಿತು ಮಾತನಾಡಿದ್ದಾರೆ. ‘ಒಂದು ಕಾಲದಲ್ಲಿ “ದರ್ಶನ್ ನನ್ನ ಸ್ವಂತ ಮಗ” ಎಂದಿದ್ದ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್, ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡು ಇವಾಗ ಮೌನವಾಗಿದ್ದಾರೆ ಯಾಕೆ?
ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಸುಮಲತಾ ಅವರು ದರ್ಶನ್ ನನ್ನನ್ನು ‘ಮದರ್ ಇಂಡಿಯಾ’ ಎಂದೇ ಕರೆಯೋದು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಅವರು ದರ್ಶನ್ ನನ್ನ ಹಿರಿಯ ಮಗ ಎಂದೇ ಹೇಳಿಕೊಂಡಿದ್ದರು. ಆದರೆ ಇಂದು ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಾತ್ರವಲ್ಲ ಎಲ್ಲೂ ಸುಮಲತಾ ಅವರು ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ. ಒಟ್ಟಿನಲ್ಲಿ ದರ್ಶನ್ ಕೊಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದು ಆದರೆ ಅವರ ಆಪ್ತ ಬಳಗದಲ್ಲಿ ಎಲ್ಲರೂ ಮೌನ ವಹಿಸಿದ್ದಾರೆ.