
ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ದಿನಾಂಕ 6/5 /2024 ರಂದು. ಬೋಳ ಶ್ರೀ ಪ್ರಶಾಂತ್ ಕಾಮತ್ ರವರನ್ನು ಭೇಟಿಯಾಗಿ ತುಳುಭಾಷೆ ,ಲಿಪಿ ,ಸಂಸ್ಕೃತಿ, ಅಚಾರ , ತುಳುನಾಡಿನ ಕ್ರೀಡೆಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಿ ತಿಳಿಸಿ ಕೊಡುವ ನಮ್ಮೆಲ್ಲರ ಜವಾಬ್ದಾರಿಯ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಬೋಳ ಪ್ರಶಾಂತ್ ಕಾಮತ್ ನಮ್ಮ ತುಳುನಾಡ್ ಟ್ರಸ್ಟ್ ನ ಸ್ಥಾಪಕರಾದ ಜಿ.ವಿ.ಎಸ್ ಉಳ್ಳಾಲ್,ಉಪಾಧ್ಯಕ್ಷರಾದ ದಯಾನಂದ ಶೆಟ್ಟಿ.ಟ್ರಸ್ಟ್‌ನ ರಾಜ್ಯ ಸಂಚಾಲಕರಾದ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಹಾಗೂ ಟ್ರಸ್ಟ್ ನ ಮಾಧ್ಯಮ ವಕ್ತಾರರಾದ ಮಿಥುನ್ ಸುವರ್ಣ ಕುಂಪಲ ಉಪಸ್ಥಿತರಿದ್ದರು.