ಆದ್ದರಿಂದ, ಡೆಂಗ್ಯೂ ಬರದಂತೆ ತಡೆಗಟ್ಟುವ ಕ್ರಮ ಉತ್ತಮ: ಸಂಸದ ಡಾ. ಮಂಜುನಾಥ್

ಬೆಂಗಳೂರು: ಡೆಂಗ್ಯೂ ನಿಯಂತ್ರಣ ಕ್ರಮವಾಗಿ ಉಚಿತ ಚಿಕಿತ್ಸೆಯನ್ನು ಕೊಡುವ ಬದಲು, ಬರದಂತೆ ಕ್ರಮ ಕೈಗೊಳ್ಳುವುದು ಉತ್ತಮ. ಏನೇನೋ ಫ್ರೀ ಕೊಡುವ ಬದಲು ಸ್ಲಂ ವಠಾರಗಳಲ್ಲಿ ವಾಸ ಮಾಡುವವರಿಗೆ ಸೊಳ್ಳೆ ಪರದೆಗಳನ್ನು ಉಚಿತವಾಗಿ ಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ತಿಳಿಸಿದ್ದಾರೆ.
ಡೆಂಗ್ಯೂ ಗಂಭೀರ ಹಂತಕ್ಕೆ ತಲುಪಿದಾಗ ಯಾವುದೇ ನಿಖರವಾದ ಚಿಕಿತ್ಸೆ ಇಲ್ಲ. ಇದನ್ನು ಮೆಡಿಕಲ್ ಎಮರ್ಜೆನ್ಸಿ ಅಂತ ಘೋಷಣೆ ಮಾಡಬೇಕು. ಸೊಳ್ಳೆ ನಿಯಂತ್ರಣ ಮಾಡುವುದರ ಜೊತೆಗೆ ಆರೋಗ್ಯ ಇಲಾಖೆ ನಗರ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ಇನ್ನೂ, ರೋಗ ಪತ್ತೆಗೆ ಹೆಚ್ಚು ದರ ತೆಗೆದುಕೊಳ್ಳುವ ಲ್ಯಾಬ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.