
ಪರ್ಯಾಯ ಶ್ರೀ ಪುತ್ತಿಗೆ ಮಠ,ಶ್ರೀ ಕೃಷ್ಣ ಮಠ ಉಡುಪಿ ಹಾಗೂ ಕಥಾ ಬಿಂದು ಪ್ರಕಾಶನ ಮಂಗಳೂರು.ಇದರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ “ಕಥಾ ಬಿಂದು ಗೀತಾ ಸಾಹಿತ್ಯೋತ್ಸವ”ದ ಸಂದರ್ಭದಲ್ಲಿ ಡಾ.ಸುಮತಿ ಪಿ. ಆಂಗ್ಲಭಾಷಾ ಉಪನ್ಯಾಸಕಿ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕಥಾ ಬಿಂದು ಪ್ರಕಾಶನದಿಂದ ಅದರ ಹದಿನೇಳನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ “ರಾಜ್ಯ ಸೌರಭ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು.