ಭೂಮಿ ತಾಯಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಆಶಯದೊಂದಿಗೆ, ತಮ್ಮ ಮಾತೃಶ್ರೀಯೊಂದಿಗೆ ಸಸಿ ನೆಟ್ಟ ಶಾಸಕರು

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ʻಏಕ್ ಪೇಡ್ ಮಾ ಕೆ ನಾಮ್ʼ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನದ ರಾಜ್ಯದಾದ್ಯಂತ ನಡೆಯಿತು.
ಇದರ ಅಂಗವಾಗಿ ಸಕಲ ಜೀವಜಂತುಗಳ ಸಲಹುವ ಭೂಮಿ ತಾಯಿಯನ್ನು ಸಂರಕ್ಷಿಸುವ ನಮ್ಮ ಕರ್ತವ್ಯ ನಿಭಾಯಿಸೋಣ ಎಂಬ ಆಶಯದೊಂದಿಗೆ ಕಾರ್ಕಳ ಶಾಸಕರು, ಮಾಜಿ ಸಚಿವರಾದ ಶ್ರೀವಿ ಸುನಿಲ್ ಕುಮಾರ್ ರವರು ತಮ್ಮ ಮನೆಯಲ್ಲಿ ಅವರ ಮಾತೃಶ್ರೀ ಅವರೊಂದಿಗೆ ಸಸಿ ನೆಟ್ಟರು.