
ನವದೆಹಲಿ: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಮಕ್ಕಳು, ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್‌ಗಳ ಎರಡು ನಿಮಿಷಗಳ ಇನ್ಸ್ಟಂಟ್ ಆಹಾರವಾದ ಮ್ಯಾಗಿ ನೂಡಲ್ಸ್ ಳ ಬೆಲೆ ಜ.1ರ ನಂತರ ಏರಿಕೆಯಾಗುವ ಸಾಧ್ಯತೆಯಿದೆ.
ಭಾರತವನ್ನು ಅತಿ ನೆಚ್ಚಿನ ದೇಶ ಎಂಬ ಪಟ್ಟಿಯ ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದದಿಂದ ಸ್ವಿಜರ್ಲೆಂಡ್ ಹಿಂದೆ ಸರಿದ ಬೆನ್ನಲ್ಲೇ ಸ್ವಿಸ್ ಬಹುರಾಷ್ಟ್ರೀಯ ಕಂಪನಿ ನೆಸ್ಲೆಗೆ ತೆರಿಗೆ ಬಿಸಿ ತಟ್ಟಿದೆ. ಇದರಿಂದ ಮ್ಯಾಗಿ, ಕಿಟ್‌ಕ್ಯಾಟ್ ಸೇರಿದಂತೆ ನೆಸ್ಲೆಯ ಇತರ ಉತ್ಪನ್ನಗಳ ಬೆಲೆ ಭಾರತದಲ್ಲಿ ಜ.1ರ ನಂತರ ಶೇ.10ರಷ್ಟು ದುಬಾರಿ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.