
ಬಜಗೋಳಿ:ಜ್ವಾಲಿ ಬಾಯ್ಸ್ ಬಜಗೋಳಿ ಇದರ ನೇತೃತ್ವದಲ್ಲಿ ಸಮಾನ ಮನಸ್ಕ ಸ್ನೇಹಿತರ ಸಹಕಾರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇದರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನಿ ಸಾಮಾಗ್ರಿ ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಂದ್ರ ಜೈನ್,ಸಮಾಜಸೇವಕರಾದ ದಿವಾಕರ್ ಸೇರ್ವೆಗಾರ್,
ಮುಖ್ಯಶಿಕ್ಷಕ ದೇವದಾಸ್ ಪಾಟ್ಕರ್, ಹಾಗೂ ಜ್ವಾಲಿ ಬಾಯ್ಸ್ ಬಜಗೋಳಿ ಇದರ ಸದಸ್ಯರಾದ ಪ್ರಮೋದ್ ಜೈನ್,ಪ್ರಶಾಂತ್ ಶೆಟ್ಟಿ, ಪ್ರಶಾಂತ್ ಕೋಟ್ಯಾನ್,ರವೀಂದ್ರ ಆಚಾರ್ಯ,ಸುಚೇತ್ ಬನಾನ್, ಸುದರ್ಶನ್,ಡಿ, ರಾವ್ ಉಪಸ್ಥಿತರಿದ್ದರು.

