24.9 C
Udupi
Friday, March 21, 2025
spot_img
spot_img
HomeBlogಜ್ಞಾನಸುಧಾ : ಎನ್.ಸಿ.ಸಿ ಶಿಬಿರ ಸಂಪನ್ನ

ಜ್ಞಾನಸುಧಾ : ಎನ್.ಸಿ.ಸಿ ಶಿಬಿರ ಸಂಪನ್ನ

ಕಾರ್ಕಳ : ದೇಶ ಮೊದಲು ಅನಂತರ ನಾವು ಎಂಬ ಭಾವನೆ ಪ್ರತಿಯೊಬ್ಬ ಬಾರತೀಯನಲ್ಲಿ ಚಿಗುರೊಡೆದಾಗ ದೇಶ ಇನ್ನಷ್ಟುಎತ್ತರಕ್ಕೆ ಏರಲು ಸಾಧ್ಯ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ನುಡಿದರು.ಅವರು ಕಾರ್ಕಳ ಜ್ಞಾನಸುಧಾದಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಇವರ ಸಹಯೋಗದಲ್ಲಿ 10 ದಿನಗಳ ಕಾಲ ನಡೆದ
ಟಿ.ಎಸ್.ಸಿ-1/ ಸಿ.ಎ.ಟಿ.ಸಿ ಎನ್.ಸಿ.ಸಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆಡೆಟ್ ಗಳನ್ನು ಉದ್ದೇಶಿಸಿ ಮಾತನಾಡಿದರು.ಈ ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿ
ಅಳವಡಿಸಿಕೊಂಡು ದೇಶ ಸೇವೆಗೆ ಅರ್ಪಣ ಮನೋಭಾವದಿಂದ ಭಾಗವಹಿಸಿ, ಸೇನೆಯಲ್ಲಿ ಉನ್ನತಸ್ಥಾನವನ್ನು ತುಂಬುವ ಭಾಗ್ಯ ತಮ್ಮದಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಕೆಡೆಟ್‌ಗಳಿಗೆ ನಡೆಸಿದ ವಿವಿಧ ಸ್ಫರ್ಧೆಗಳ
ಬಹುಮಾನವನ್ನು ವಿತರಿಸಲಾಯಿತು. ಶಿಬಿರಾದಿಕಾರಿಣಿ ಕ್ಯಾ.ನವ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದ ವರದಿಯನ್ನು ಕ್ಯಾಪ್ಟನ್ ಡಾ.ಇ.ಎಸ್.ಕೆ.ಉಡುಪ ಮಂಡಿಸಿದರು. ಚೀಫ್ ಆಫಿಸರ್
ವಿವೇಕಾನಂದ ಹಾಗೂ ಲೆಫ್ಟಿನೆಂಟ್ ಮಂಜುನಾಥ್ ಮುದೂರು ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಫಸ್ಟ್ ಆಫಿಸರ್ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು.
ಈ ಸಂದರ್ಭ ಎನ್.ಸಿ.ಸಿ. ಕಮಾಂಡಿಂಗ್ ಆಫಿಸರ್ ಕರ್ನಲ್ ರಾಹುಲ್ ಚೌಹಾನ್, ಲೆಫ್ಟಿನೆಂಟ್ ಕರ್ನಲ್ ಎಂ.ಎಸ್.ರಾವತ್, ಕಾರ್ಕಳ ಜ್ಞಾನಸುಧಾ ಸಿ.ಇ.ಒ. ಹಾಗೂ ಪ್ರಾಂಶುಪಾಲರಾದ ದಿನೇಶ್. ಎಂ. ಕೊಡವೂರ್, ಪಿ.ಆರ್.ಒ. ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಸಾಹಿತ್ಯ
ಹಾಗೂ ಎನ್.ಸಿ.ಸಿ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ೪೫೦
ಎನ್.ಸಿ.ಸಿ. ಕೆಡೆಟ್‌ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಎನ್.ಸಿ.ಸಿ. ಕಮಾಂಡಿAಗ್ ಆಫಿಸರ್ ಕರ್ನಲ್ ರಾಹುಲ್ ಚೌಹಾನ್, ಲೆಫ್ಟಿನೆಂಟ್
ಕರ್ನಲ್ ಎಂ.ಎಸ್.ರಾವತ್‌ರವರ ಉಸ್ತುವಾರಿಯಲ್ಲಿ ನಡೆದ ಹತ್ತು ದಿನಗಳ ಶಿಬಿರದಲ್ಲಿ ಕಡೆಟ್‌ಗಳಿಗೆ ಜೂನ್ 2 ರಂದು ವ್ಯಕ್ತಿತ್ವ ನಿರ್ಮಾಣದ ಕುರಿತಂತೆ ಜ್ಞಾನಸುಧಾದ ಸಂಖ್ಯಾಶಾಸ್ತç
ಉಪನ್ಯಾಸಕರಾದ ಲೆಫ್ಟಿನೆಂಟ್ ಮಂಜುನಾಥ್ ಮುದೂರು ಮಾಹಿತಿ ನೀಡಿದರು. ಜೂನ್ ೪ರಂದು ಆರೋಗ್ಯ ಮತ್ತು ಸ್ವಚ್ಛತೆಯ ಕುರಿತಂತೆ ಕುಕ್ಕುಂದೂರಿನ ಪ್ರಾ.ಆ.ಕೇಂದ್ರದ ಆರೋಗ್ಯಾಧಿಕಾರಿ
ಡಾ.ಪ್ರತೀಕ್ಷ ಶೆಟ್ಟಿಯವರು ವಿಚಾರ ಹಂಚಿಕೊಂಡರು. ಜೂನ್ 5 ರಂದು ಬೆಂಕಿ ಸಹಿತ ಆಕಸ್ಮಿಕ ಅವಘಡಗಳಿಂದ ಪಾರಾಗುವ ಕುರಿತಂತೆ ಫೈರ್ ಸರ್ವಿಸ್ ಸ್ಟೇಶನ್ ಕಾರ್ಕಳ ಇವರಿಂದ ಪ್ರಾತ್ಯಕ್ಷಿತೆಯೊAದಿಗೆ ಜಾಗೃತಿಯನ್ನು ಹಾಗೂ ವಿಶ್ವ ಪರಿಸರ ದಿನದ ಕುರಿತು ಶಿಬಿರಾಧಿಕಾರಿ ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಇ.ಎಸ್.ಕೆ.ಉಡುಪರವರು ಮಾಹಿತಿ ನೀಡಿದರು. ಜೂನ್ 6 ರಂದು ಎನ್.ಸಿ.ಸಿ ಅಧಿಕಾರಿಗಳಿಂದ ಭಾರತೀಯ ಸೇನೆಗೆ ಸೇರುವ ಅವಕಾಶಗಳ
ಕುರಿತಂತೆ ಮಾಹಿತಿ ವಿನಿಮಯ ನಡೆಯಿತು. ಜೂನ್ 2 ರಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಅಜೆಕಾರಿನ ಎಸ್.ಐ. ಶ್ರೀ ರವಿ ಡಿ.ಕೆ ಉಪನ್ಯಾಸ ನಡೆಸಿಕೊಟ್ಟರು ಹಾಗೂ ಅ.ಪ.ಗೋ.ಎ. ಟ್ರಸ್ಟ್ನ ಅಧ್ಯಕ್ಷರಾಧ ಡಾ.ಸುಧಾಕರ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಜೂನ್ 8 ರಂದು ಸೈಬರ್ ಅಪರಾಧ ತಡೆ ನಿಗ್ರಹದ ಕುರಿತು ಉಡುಪಿ ಸೈಬರ್ ಸೆಲ್‌ನವರು ಜಾಗೃತಿಯನ್ನು ಮೂಡಿಸಿದರು.
ಶಿಬಿರಕ್ಕೆ ಮಂಗಳೂರಿನ ಗ್ರೂಪ್ ಹೆಡ್‌ಕ್ವಾರ್ಟರ್‌ನ ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ. ಭಗಸ್ತç, 2 ಕ.ಇಂ.ಕೊಯ್ ಸುರತ್ಕಲ್ ಕಮಾಂಡಿಗ್ ಆಫಿಸರ್ ಕರ್ನಲ್ ಅನಿಲೇಶ್ ಕೌಶಿಕ್ ಹಾಗೂ
4ಕ.ಇಂ.ಕೊಯ್ ಕಮಾಂಡಿಗ್ ಆಫಿಸರ್ ಕರ್ನಲ್ ಕೊತ್ವಾಲ್‌ರವರು
ಭೇಟಿ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page