
ಜೆಸಿಐ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಜೇಸಿ ಟಿ.ವಿ.ಎನ್ ಮೂರ್ತಿಯವರು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಗೆ ಆಗಮಿಸಿದರು.
ಇವರನ್ನು ಆತ್ಮೀಯವಾಗಿ ಅದ್ದೂರಿಯಿಂದ ಬರಮಾಡಿಸಿಕೊಳ್ಳಲಾಯಿತು. ಅವರು ಮಾತನಾಡುತ್ತಾ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಪುಣ್ಯವಂತರು. ಇಲ್ಲಿ ಶಿಸ್ತು ಬದ್ಧವಾದ ವಾತಾವರಣವಿದೆ. ಈ ಪ್ರಪಂಚದಲ್ಲಿ ಮನುಷ್ಯ ಸುಂದರವಾದ ಬುದ್ದಿವಂತ ಏಕೈಕ ವ್ಯಕ್ತಿ. ನಮ್ಮಿಂದ ಎಲ್ಲವೂ ಸಾಧ್ಯ. ವಿದ್ಯಾರ್ಥಿಗಳು ಓದುವಾಗ ಚಾಲೆಂಜ್ ಮಾಡಿ ಓದಬೇಕು. ಸದಾ ಜೀವನದಲ್ಲಿ ಪ್ರಯತ್ನಗಳನ್ನು ಮಾಡಬೇಕು. ನಿರಾಶವಾದಿಗಳಾಗಬಾರದು. ನಾವು ಏನು ಮಾಡುತ್ತೇವೊ ಅದು ದೇಶಕ್ಕಾಗಿ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು, ಜೇಸಿಐ ಅಧ್ಯಕ್ಷರಾದ ಜ
ಜೇಸಿ ಶ್ವೇತಾ ಜೈನ್, ಜೇಸಿ ವಿಘ್ನೇಶ್, ಶಾಲಾ ಮುಖೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.




































