
ಜಿ ಎಸ್ ಬಿ ಮಹಿಳಾ ವಿಭಾಗ ಕಾರ್ಕಳ ವತಿಯಿಂದ ಅಂತರರಾಷ್ಟ್ರೀಯ ಯೋಗದಿನಾಚರಣೆ ಕಾಶಿಮಠದಲ್ಲಿ ನಡೆಯಿತು.25 ವರ್ಷದಿಂದ ನಿರಂತರ ಯೋಗಾಭ್ಯಾಸ ಮಾಡಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಗಳಲ್ಲಿಯೂ ಆಯ್ಕೆಯಾದ ಶ್ರೀಮತಿ ದಿವ್ಯಾಮಲ್ಯರವರು ದೀಪ ಪ್ರಜ್ವಲನೆ ಮಾಡಿ ಯೋಗಾಭ್ಯಾಸ ತರಬೇತಿ ನೀಡಿದರು.
ಯೋಗವನ್ನು ಸರಿಯಾದ ಭಂಗಿಯಲ್ಲಿ ನಿಧಾನವಾಗಿ ಶ್ವಾಸದ ಬಗ್ಗೆ ಗಮನ ಕೊಟ್ಟು ಕ್ರಮಬದ್ಧವಾಗಿ ನಿರಂತರ ಮಾಡಬೇಕು..ದೈಹಿಕ ಹಾಗೂ ಮಾನಸಿಕ ತೊಂದರೆಗಳಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷೆ ದಿವ್ಯಾ ಡಿ ಪೈ ಸ್ವಾಗತಿಸಿ ವಾರಿಜಾ ವಿ ಕಾಮತ್ ಕಾರ್ಯಕ್ರಮ ನಿರೂಪಿಸಿ ಶ್ವೇತಾ ಶೆಣೈ ರವರು ವಂದಿಸಿದರು.ಜಿ ಎಸ್ ಬಿ ಮಹಿಳಾ ವಿಭಾಗದ ಸದಸ್ಯರಾದ ಶ್ರೀಮತಿಯರಾದ ರಾಧಿಕಾ ಶೆಣೈ ,ವಂದನಾ ಶೆಣೈ,ಸಂಧ್ಯಾಕಾಮತ್,ಲಲಿತಾ ಭಟ್,ಪ್ರಜ್ಞಾ ಪೈ,ರೇಷ್ಮಾಶೆಣೈ,ಪ್ರಭಾ ನಾಯಕ್ ಉಪಸ್ಥಿತರಿದ್ದರು.