
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಸುದೀರ್ಘವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಸ್ತುವಾರಿ ಕಾರ್ಯ ದರ್ಶಿಗಳ ಸಭೆ ನಡೆಸಿ ಮಾತನಾಡಿದ್ದು ಈ ವೇಳೆ ‘ಜಿಲ್ಲಾಧಿಕಾರಿಗಳಿಗೆ ನಾವೇ ಮಹಾರಾಜರು ಎನ್ನುವ ಭಾವನೆ ಬೇಡ. ರಾಜಕಾರಣಿ ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎಂಬುದನ್ನು ಅರಿತು ಜನರ ಸಮಸ್ಯೆ ಪರಿಹರಿಸಿ. ನನ್ನವರೆಗೂ ಜನರ ಅಹವಾಲು ಬರುತ್ತಿವೆ ಎಂದರೆ ನೀವು ಜನರನ್ನು ಭೇಟಿ ಮಾಡುತ್ತಿಲ್ಲ ಎಂದರ್ಥ. ಇನ್ನು ಈ ನಿರ್ಲಕ್ಷ್ಯ ಮುಂದುವರೆದರೆ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇವೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿಗಳ ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸ್ಥಳೀಯವಾಗಿ ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ? ಜಿಲ್ಲಾಧಿಕಾರಿ, ಜಿಲ್ಲಾಪಂಚಾಯ್ತಿ ಸಿಇಓಗಳಿಗೆ ಬಂದ ಕೊಟ್ಟು ಇರುವುದು ಜನಸಂಪರ್ಕ ಸಭೆ ಅರ್ಜಿಗಳನ್ನು ಪಡೆದು ಮುಚ್ಚಳಿಕೆ ಕೈತೊಳೆದುಕೊಳ್ಳುವುದಿಕ್ಕಾ? ಎಂದು ಕಟುವಾಗಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಗೆಜೆಟಿಯರ್, ಎಕನಾಮಿಕ್ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಸಂವಿಧಾನ ಕೇವಲ ಓದುವುದಕ್ಕಲ್ಲ ಅನುಷ್ಠಾನಕ್ಕೆ ಎಂಬುದನ್ನು ಅರಿಯಿರಿ. ಫೈಸರ್ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿಕೃಷ್ಣರಾಜ ಒಡೆಯರ್, ಗಾಯಕ್‌ವಾಡ್, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಅಕಾರಿಗಳು ತಳಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಬೇಕು. ನನ್ನವರೆಗೆ ಬಂದರೆ ನಿಮ್ಮ ಮೇಲೇ ಕ್ರಮ ಕೈಗೊಳ್ಳಲಾಗುವುದು.
3 ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಿ. ಈ ಸಲದ ಮಳೆಯಿಂದ ಹಾನಿಯಾದ ಕಡೆ ತ್ವರಿತ ಪರಿಹಾರ ಒದಗಿಸಿ, ಅನರ್ಹ ಕಾರ್ಡ್ ರದ್ದುಪಡಿಸಿ
5 ಗ್ಯಾರಂಟಿ ಯೋಜನೆ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿಯಲು 5 ಕೋಟಿ ಫಲಾನುಭವಿಗಳ ಸಮೀಕ್ಷೆ ನಡೆಸಿ ಎಂದು ಸಿಎಂ ಸಲಹೆ ನೀಡಿದರು.