ಜನ್ಮಭೂಮಿ ಸಂಸ್ಕಾರ ಕೇಂದ್ರದ ಮಕ್ಕಳಿಗೆ ವನಮಹೋತ್ಸವದ ಪ್ರಯುಕ್ತ ಗಿಡ ವಿತರಣೆ

ಜನ್ಮಭೂಮಿ ಫೌಂಡೇಶನ್ (ರಿ)ಮಂಗಳೂರು ಜನ್ಮಭೂಮಿ ಸಂಸ್ಕಾರ ಕೇಂದ್ರ ಮರೋಳಿ ಇದರ ವತಿಯಿಂದಪರಿಸರದಲ್ಲಿ ಸಸ್ಯ ಸಂಪತ್ತಿನ ಮಹತ್ವ ಮತ್ತು ಜಾಗೃತಿಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ಜನ್ಮಭೂಮಿ ಸಂಸ್ಕಾರ ಕೇಂದ್ರದ ಮಕ್ಕಳಿಗೆ,ಶಿಕ್ಷಕರಿಗೆ ಮತ್ತು ಸಾರ್ವಜನಿಕವಾಗಿ ಸುಮಾರು ನೂರು ಗಿಡಗಳನ್ನು ವಿತರಿಸಲಾಯಿತು.

ಗಿಡಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಯವರಣ ಮತ್ತು ಪ್ರಮೋದ್ ಮರೋಳಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಗಣೇಶ್ ಶೆಟ್ಟಿ ಗುಡ್ಡೆಗುತ್ತು.ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಅಧ್ಯಕ್ಷರು,ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿನಗರ ಸಂಘಚಾಲಕರಾದ ಜಯರಾಮ್,ಬಾಲಗೋಕುಲ ಪ್ರಮುಖ್ ವಿಜಯ ಪಕ್ಕಳ,ಕೃಷ್ಣ ಎಸ್ ಆರ್,ಪ್ರಮೋದ್ ನರ್ಸರಿ,ಸಂದೀಪ್ ಎಕ್ಕೂರು ಬಿಜೆಪಿಯ ಯುವಮೊರ್ಚ ಪ್ರಮುಖರು,ರಾಜೇಶ್ ಸೇವ ಪ್ರಮುಖ್,ಹಾಗೂ ಜನ್ಮಭೂಮಿ ಫೌಂಡೇಶನ್ ಪದಾಧಿಕಾರಿಗಳು ಎಲ್ಲಾ ಶಿಕ್ಷರು ಉಪಸ್ಥಿತರಿದ್ದರು.