
ಬೀದರ್: ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಬೀದರ್‌ನ ನಿರ್ಣಾ ಗ್ರಾಮದಲ್ಲಿ ರೈತ ಸಂಪರ್ಕ ಕಚೇರಿಯಲ್ಲಿ ಸಹಾಯಕ ಅಧಿಕಾರಿಯಾಗಿದ್ದ ಆನಂದ (32) ಅವರು ಕರ್ತವ್ಯದ ಸಂದರ್ಭ ಕೋಡಂಬಲ್ ಚೆಕ್ ಪೋಸ್ಟ್‌ನಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಸಿಪಿಐ ಶ್ರೀನಿವಾಸ್ ಅಲ್ಲಾಪುರೆ ಅವರುಹುಮನಾಬಾದ್ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇನ್ನು ಬಾಗಲಕೋಟೆಯ ಮುಧೋಳ ನಗರದಲ್ಲಿ ಜಮಖಂಡಿ ತಾಲೂಕಿನ ಬಿದರಿ ಪ್ರಾಥಮಿಕ ಶಾಲೆ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಸೋಮವಾರ ಲೋಕಸಭೆ, ವಿಧಾನಸಭೆ ಉಪಚುನಾವಣೆ ನಿಮಿತ್ತ ನಗರದ ಶ್ರೀ ಪ್ರಭು ಕಾಲೇಜಲ್ಲಿ ಬೆಳಗಿನಿಂದಲೇ ಮತಯಂತ್ರಗಳ ವಿತರಣೆ ನಡೆಯುತ್ತಿದ್ದಾಗ ಯಾದಗಿರಿ ಜಿಲ್ಲೆ ಸುರಪುರದಲ್ಲಿ ಬಿಸಿಲ ತಾಪ ಹೆಚ್ಚಳದಿಂದಾಗಿ ಚುನಾವಣಾ ಕರ್ತವ್ಯದಲ್ಲಿದ್ದ ಮಲ್ಲಿಕಾರ್ಜುನ (55) ಎಂಬುವರಿಗೆ ಸ್ಟ್ರೋಕ್ ಆಗಿದ್ದು, ತಕ್ಷಣ ವೈದ್ಯರು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.



















































































