
ಚಾರ ಗ್ರಾಮದ ಕೊಂಡೆಜೆಡ್ಡು ಚಂದ್ರನಾಥ ಸ್ವಾಮಿ ಭಜನಾ ಮಂಡಳಿಯ ಸಭಾಂಗಣದಲ್ಲಿ ಚಾರ ಗ್ರಾಮದ ಬಾಲಗೋಕುಲ ಘಟಕದಿಂದ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನಾಚರಣೆ ನಡೆಯಿತು.
ಬಲಿಷ್ಠವಾದ ಮೊಘಲ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯಗಳನ್ನು ತಿಳಿದು ಅದನ್ನು ನಿವಾರಿಸುವ ಮಾರ್ಗವನ್ನು ಚಿಂತಿಸಿ, ಧೈರ್ಯ ,ಸಾಹಸದಿಂದ ,ಜಾಣ್ಮೆಯಿಂದ ಹೆಜ್ಜೆ ಇರಿಸಿ ಮೊಘಲ್ ಸೇನಾನಿಗಳಿಗೆ ತಕ್ಕ ಶಾಸ್ತಿ ಮಾಡಿದನು ಎಂದು ಹೇಳಿದರು.ಅಮೃತ ಭಾರತಿ ವಿದ್ಯಾಲಯದ ಉಪಮುಖ್ಯೋಪಾಧ್ಯಾಯರು , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ಇವರು ಚಾರ ಬಾಲಗೋಕುಲದ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಮಾತನಾಡಿದರು.ಗ್ರಾಮ ವಿಕಾಸ ಹೆಬ್ರಿ ತಾಲೂಕು ಘಟಕವಾದ ಚಾರ ಬಾಲಗೋಕುಲ ಪ್ರತಿ ಭಾನುವಾರದಂದು ಸಮಯ ಸಂಜೆ 4 ಗಂಟೆಯಿಂದ 5 ಗಂಟೆಯ ತನಕ ಬಾಲಗೋಕುಲ ನಡೆಯುತ್ತದೆ. ಕಾರ್ಯಕ್ರಮದಲ್ಲಿ ಮಕ್ಕಳ ಸಂಖ್ಯೆ -10 ಪೋಷಕರು 3 ಉಪಸ್ಥಿತರಿದ್ದರು.ಶಾಂತಿ ಮಂತ್ರದೊಂದಿಗೆ ಅವಧಿ ಸಂಪನ್ನಗೊಂಡಿತು.ಬಾಲಗೋಕುಲದ ಮಾತಾಜಿ ಶ್ರೀಮತಿ ನಂದಿತಾ ಕಾಮತ್ ಚಾರ ನಿರೂಪಿಸಿದರು , ಶ್ರೀಮತಿ ಶೃತಿ ಭಾಸ್ಕರ ಗಾಣಿಗ ವಂದಿಸಿದರು.