
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಆರಂಭದಲ್ಲಿ ಮುನ್ನಡೆಯಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಯವರನ್ನು ಹಿಂದಿಕ್ಕಿದ ಯೋಗೇಶ್ವರ್ 23,000 ಮತಗಳ ಭರ್ಜರಿ ಅಂತರ ಕಾಯ್ದುಕೊಂಡಿದ್ದಾರೆ. ಇದಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳಾದ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ 8,000 ಮತಗಳ ಮುನ್ನಡೆ, ಶಿಗ್ಗಾಂವಿಯಲ್ಲಿ,ಯಾಸಿರ್ ಖಾನ್ ಪಠಾಣ್ 12,000 ಮತಗಳ ಮುನ್ನಡೆಯಲ್ಲಿದ್ದಾರೆ.
ಫಲಿತಾಂಶಕ್ಕೂ ಮುನ್ನವೇ ಯೋಗೇಶ್ವರ್ ಅವರ ವಿಜಯೋತ್ಸವದ ಸಂಭ್ರಮಾಚರಣೆ ಆರಂಭಗೊಂಡಿದೆ.



















