ಕಾರ್ಕಳ ಜೇಸಿಸ್ ವತಿಯಿಂದ ಮಕ್ಕಳಿಗಾಗಿ “ಕಾನೂನು ಅರಿವು” ಮಾಹಿತಿ ಕಾರ್ಯಾಗಾರ

ಕಾರ್ಕಳ ಜೇಸಿಸ್ ವತಿಯಿಂದ ಮಕ್ಕಳಿಗಾಗಿ “ಕಾನೂನು ಅರಿವು “ಮಾಹಿತಿ ಕಾರ್ಯಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೆಂಜಾಳದಲ್ಲಿ ನಡೆದಿದ್ದು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಆಗಿರುವ ಶ್ರೀಯುತ ಸಂತೋಷ್ ಕಾರ್ಕಳ, ಇವರು ಮಕ್ಕಳಿಗೆ ಕಾನೂನಿನ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದ್ದು ಹೆಚ್ಚುತ್ತಿರುವ ಪೋಕ್ಸೋ. ಬಗ್ಗೆ ವಿವರಿಸುತ್ತಾ ಅಪ್ರಾಪ್ತ ವಿದ್ಯಾರ್ಥಿಗಳು ಇತೀಚಿನ ದಿನಗಳಲ್ಲಿ ಬಹಳ ಜಾಗೂರಕರಾಗಿರಬೇಕು. ಯಾವುದೇ ರೀತೀಯ ತೊಂದರೆ ಆದಲ್ಲಿ ವಿಳಂಬ ಕೂಡಲೇ ಸಂಬಂಧಪಟ್ಟವರಿಗೆ ತಿಳಿಸಿದಲ್ಲಿ ಮುಂದಕ್ಕೆ ಆಗುವ ಸಮಸ್ಯೆ ತಪ್ಪಿಸಬಹುದು ಎಂದು ತಿಳಿಸಿದರು.
ಮಾದಕ ವ್ಯಸನ. ಸೈಬರ್ ಅಪರಾಧ. ಸಂಚಾರ ಸುರಕ್ಷತೆ ಬಗ್ಗೆ. 112 ತುರ್ತು ಕರೆ. 1930 ಸೈಬರ್ ಕರೆಯ ಬಗ್ಗೆ ವಿವರಿಸಿದರು.
ಪೊಲೀಸ್ ಇಲಾಖೆ ಮಕ್ಕಳ ಸ್ನೇಹಿ ಆಗಿದ್ದು ಯಾವಾಗಲೂ ಮಕ್ಕಳ ಹಾಗೂ ಸಮಾಜದ ಸಹಾಯಕ್ಕೆ ಸಿದ್ಧರಿದ್ದಾರೆ ಎ೦ದು ತಿಳಿಸಿದರು.
ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಒಳ್ಳೆಯ ಮಾರ್ಗದಲ್ಲಿ ನಡೆದು ಹೆತ್ತವರಿಗೆ. ವಿದ್ಯೆ ಕಲಿಸಿದ ಗುರುಗಳಿಗೆ. ಕಲಿತ ಶಾಲೆಗೆ. ಊರಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಎಸ್ ಜೈನ್
ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ರವರು ಉಪಸ್ಥಿತರಿದ್ದು ಶಾಲಾ ಮುಖ್ಯೋಪಾಧ್ಯಾಯರಾರ ಶ್ರೀಮತಿ ವಿಶಾಲಾಕ್ಷಿ ರವರು ಸ್ವಾಗತಿಸಿ,ಜೇಸಿಐ ಕಾರ್ಕಳದ ಅಧ್ಯಕ್ಷರಾದ ಜೇಸಿ ಶ್ವೇತಾ ಎಸ್ ಜೈನ್ ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು. ವಿದ್ಯಾರ್ಥಿಗಳಳು ಭಾಗವಹಿಸಿದ್ದರು.




















