
ಹೆಬ್ರಿ :ಸರ್ವವ್ಯಾಪಿಯಾದ ದೇವರ ಮಹಿಮೆ ಅಪಾರವಾದುದು. ಸಕಲ ದುರಿತ ನಿವೃತ್ತಿಗೆ ನರಸಿಂಹ ಮಂತ್ರ ರಾಮಬಾಣ. ಗೋವುಗಳ ಆರೋಗ್ಯ ವೃದ್ಧಿ, ಲೋಕ ಕ್ಷೇಮಕ್ಕಾಗಿ ನಡೆಸಲು ಉದ್ದೇಶಿಸಿರುವ ಶ್ರೀ ನೃಸಿಂಹ ಜಪಯಜ್ಞ ವಿಪ್ರ ಬಂಧುಗಳ ಸಹಕಾರದಿಂದ ನಿರ್ವಿಘ್ನವಾಗಿ ನೆರವೇರಲಿ, ಕೃಷ್ಣದೇವರ ಅನುಗ್ರಹ ಸದಾ ದೊರೆಯುವಂತಾಗಲಿ ಎಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಅವರು ಹೆಬ್ರಿ ಗಿಲ್ಲಾಳಿ ಗೋಶಾಲೆಗೆ ಆಗಮಿಸಿ ಎರಡು ವರ್ಷಗಳ ಕಾಲ ನಡೆಯಲಿರುವ ಶ್ರೀ ನೃಸಿಂಹ ಜಪಯಜ್ಞದ ಮಂತ್ರೋಪದೇಶ ನೀಡಿ ಚಾಲನೆ ನೀಡಿದರು. ಗಿಲ್ಲಾಳಿ ಗೋಶಾಲೆಯ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.ಕಾರ್ಕಳ, ಹೆಬ್ರಿ, ಉಡುಪಿ ತಾಲೂಕಿನ 75 ಕ್ಕೂ ಹೆಚ್ಚು ವಿಪ್ರ ಬಂಧುಗಳು ಜಪಯಜ್ಞದ ದೀಕ್ಷೆಯನ್ನು ಸ್ವಾಮಿಜಿಯವರಿಂದ ಪಡೆದುಕೊಂಡರು.