ಸಮಸ್ಯೆ ಇರುವ ಜಾಗಕ್ಕೆ ಟ್ರೀಟ್ಮೆಂಟ್ ಕೊಡುವುದಕ್ಕೆ ಸರಕಾರಕ್ಕೆ ಭಯ ಏಕೆ..?: ಶಾಸಕ ವಿ. ಸುನಿಲ್ ಕುಮಾರ್ ಪ್ರಶ್ನೆ

ಸಕ್ಕರೆ ನಾಡು ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯ ವೇಳೆ ಕಲ್ಲು ತೂರಾಟದ ಅಹಿತಕರ ಘಟನೆ ನಡೆದಿದೆ.
ಇದರಿಂದಾಗಿ ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರದ ಕುರಿತು ಇಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ, ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಇಂತಹ ಘಟನೆ ಮರುಕಳಿಸುತ್ತಿದೆ. ಹಿಂದೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಅಸಹನೆ ಹೆಚ್ಚುತ್ತಿದೆ. ಪುನರಾವರ್ತಿತ ಘಟನೆಗಳತ್ತ ದೃಷ್ಟಿ ಹರಿಸಿದರೆ ಮಂಡ್ಯ ಜಿಹಾದಿ ಮನಸ್ಥಿತಿಯ ವ್ಯಕ್ತಿಗಳ ಆಡಂಬೋಲವಾಗುತ್ತಿರುವ ಅನುಮಾನ ಬರುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಮತಾಂಧ ಶಕ್ತಿಗಳ ಕ್ರೋಡೀಕರಣವಾಗುತ್ತಿದ್ದರೂ, ಸಿದ್ದರಾಮಯ್ಯ ಸರಕಾರ ಹಿಂದುಗಳು ಹಾಗೂ ಬಿಜೆಪಿಯತ್ತ ಬೊಟ್ಟು ಮಾಡಿ ತೋರುತ್ತಿದೆ. ಸಮಸ್ಯೆ ಇರುವ ಜಾಗಕ್ಕೆ ಟ್ರೀಟ್ಮೆಂಟ್ ಕೊಡುವುದಕ್ಕೆ ಕಾಂಗ್ರೆಸ್ ಸರಕಾರಕ್ಕೆ ಏಕೆ ಭಯ ಎಂದು ಪ್ರಶ್ನಿಸಿದ್ದಾರೆ.