
ಬೆಂಗಳೂರು: ತರಕಾರಿಗಳ ಬೆಲೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಲೆ ಈಗ ಬರೋಬ್ಬರಿ 80 ರೂ. ಗಡಿ ದಾಟಿವೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.
ಮಳೆ ಕೊರತೆಯಿಂದ ಹಾಗೂ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಈ ಮಧ್ಯೆ, ಕಳೆದ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ತಲೆಕೆಡಿಸಿಕೊಂಡಿದ್ದಾರೆ.
ತರಕಾರಿಗಳ ಹಿಂದಿನ ಬೆಲೆ ಮತ್ತು ಈಗಿನ ಬೆಲೆಯ ಪಟ್ಟಿ:
- ಕ್ಯಾರೇಟ್ – 80 – 82
- ಬೀನ್ಸ್ – 220 – 220
- ನವಿಲುಕೋಸು – 60 – 102
- ಬದನೆಕಾಯಿ – 60 – 70
- ದಪ್ಪ ಮೆಣಸಿನಕಾಯಿ – 40 – 65
- ಬಟಾಣಿ – 140 – 180
- ಬೆಂಡೆಕಾಯಿ – 60 – 66
- ಟೊಮಾಟೋ – 30 – 60
- ಆಲೂಗೆಡ್ಡೆ -30 – 56
- ಹಾಗಲಕಾಯಿ – 60 – 82
- ಸೋರೆಕಾಯಿ – 40 – 50
- ಬೆಳ್ಳುಳ್ಳಿ – 300 – 338
- ಶುಂಠಿ – 180 – 195
- ಪಡುವಲಕಾಯಿ – 30 – 60
- ಗೋರಿಕಾಯಿ – 50 – 89
- ಹಸಿ ಮೆಣಸಿಕಾಯಿ – 80 – 106
- ಬಿಟ್ರೋಟ್ – 40 – 46
- ಈರುಳ್ಳಿ – 20 – 39