
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ಗಂಡನ ಮೇಲಿನ ಸಿಟ್ಟಿಗೆ ತಾಯಿಯೊಬ್ಬಳು ತನ್ನ ಆರು ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ.
ಸಾವಿತ್ರಿ ಎಂಬ ಮಹಿಳೆ ಗಂಡ ರವಿಕುಮಾರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು ಜಗಳ ತೆಗೆದಿದ್ದು ಬಳಿಕ ಕೋಪದಲ್ಲಿ ಮಗುವನ್ನು ಮನೆಯ ಬಳಿ ಇದ್ದ ಮೊಸಳೆಗಳಿದ್ದ ನಾಲೆಗೆ ಎಸೆದಿದ್ದಾಳೆ. ಆರು ವರ್ಷದ ವಿನೋದ್ ಮೊಸಳೆ ಬಾಯಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ನಂತರ ಪಶ್ಚಾತ್ತಾಪದಿಂದ ತನ್ನ ತಪ್ಪಿನ ಅರಿವಾಗಿ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.