
ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಮೂಲಭೂತ
ಮಂತ್ರವಾಗಬೇಕು: ನಿವೃತ್ತ ಸಿಎ ಕಮಲಾಕ್ಷ ಕಾಮತ್
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್: ಪದವಿಪೂರ್ವ ವಿಭಾಗದ ಪ್ರತಿಭಾ ಪುರಸ್ಕಾರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ
ಪುರಸ್ಕಾರ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ
ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಸಿಎ ಕಮಲಾಕ್ಷ
ಕಾಮತ್ ಅವರು ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ
ಅವರು “ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಮೂಲಭೂತ
ಮಂತ್ರವಾಗಬೇಕು. ಸಂಸ್ಕಾರವನ್ನು ಎಳವೆಯಿಂದಲೇ
ರೂಢಿಸಿಕೊಳ್ಳಬೇಕು. ಏಕೆಂದರೆ ದೊಡ್ಡವರಾದ ಮೇಲೆ ಅದನ್ನು
ಬೆಳೆಸಿಕೊಳ್ಳುವುದು ಕಷ್ಟ. ಕಲಿಕೆಯ ಜೊತೆ ಜೊತೆಗೆ
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆತ್ಮವಿಶ್ವಾಸ
ವೃದ್ಧಿಯಾಗುತ್ತದೆ” ಎಂದು ಹೇಳಿದರು. ಇನ್ನೋರ್ವ ಅತಿಥಿ ಸಿವಿಲ್
ಇಂಜಿನಿಯರ್ ನಾಸಿರ್ ಶೇಖ್ ಅವರು ಮಾತನಾಡಿ “ ಬೀಳ್ಕೊಡುಗೆ ಎಂದರೆ
ಶಾಲೆಯನ್ನು ಬಿಟ್ಟು ಹೋಗುವುದಲ್ಲ, ಬದಲಾಗಿ ಕಲಿತ ಶಾಲೆಯನ್ನು
ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವುದು. ಸಮಾಜದಲ್ಲಿ ಸೌಹಾರ್ದತೆ
ಮೂಡಿಸುವಲ್ಲಿ ಯುವಜನತೆ ಶ್ರಮಿಸಬೇಕು” ಎಂದು ಹೇಳಿದರು.
ಮತ್ತಿಬ್ಬರು ಅತಿಥಿಗಳಾದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ನಿಟ್ಟೆಯ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ಡೀನಾ
ಮರಿಯ ಫೆರ್ನಾಂಡಿಸ್ ಹಾಗೂ ಸಂಸ್ಥೆಯ ಸಮಾಲೋಚಕಿ ಸಿಸ್ಟರ್
ಡಾ.ಶಾಲೆಟ್ ಸಿಕ್ವೇರಾ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೆöÊಸ್ಟ್ಕಿಂಗ್ ಎಜುಕೇಷನ್
ಟ್ರಸ್ಟ್ನ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ
“ಕ್ರೆöÊಸ್ಟ್ಕಿಂಗ್ ವಿದ್ಯಾರ್ಥಿಗಳು ತಮ್ಮ ಉತ್ತಮ ಗುಣನಡತೆಯಿಂದಾಗಿ
ಹೋದ ಕಡೆಗಳಲ್ಲಿ ಉತ್ತಮ ಹೆಸರು ಸಂಪಾದಿಸುತಿದ್ದಾರೆ.
ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ಮಕ್ಕಳು ನಿರಂತರ
ಪರಿಶ್ರಮಿಗಳಾಗಬೇಕು. ಮಕ್ಕಳು ಶಿಕ್ಷಕರ ಪ್ರೀತಿ ಕಾಳಜಿಯನ್ನು
ಸದಾ ಕಾಲ ನೆನಪಿಟ್ಟುಕೊಳ್ಳಬೇಕು” ಎಂದು ಹೇಳಿದರು. ಸಂಸ್ಥೆಯ
ಪ್ರಾಚಾರ್ಯರಾದ ಲಕ್ಷ್ಮೀ ನಾರಾಯಣ ಕಾಮತ್ ಅವರು
ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ
ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ
ವಿತರಿಸಿದರು. ನಂತರ ಮನೋರಂಜನಾ ಕಾರ್ಯಕ್ರಮಗಳು
ಜರಗಿದವು. ಉಪನ್ಯಾಸಕರಾದ ದೀಪಕ್, ಶ್ರೀಮತಿ ಸೌಮ್ಯ ನಾಯ್ಕ್,
ಕು.ಅಭಿನಯ, ಶ್ರೀಮತಿ ಶಿಜಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಗಣಿತ ಉಪನ್ಯಾಸಕಿ ಶ್ರೀಮತಿ ಭಾರತಿ ಸ್ವಾಗತಿಸಿ ಆಂಗ್ಲಭಾಷಾ ಉಪನ್ಯಾಸಕಿ
ಶ್ರೀಮತಿ ಪಾವನಾ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.
ರಸಾಯನ ಶಾಸ್ತç ಉಪನ್ಯಾಸಕಿ ಶ್ರೀಮತಿ ನಯನಾ ವಂದಿಸಿದರು.