
ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಅಮೋಘ ರಾವ್ ರವರು ಜೂನ್ 20ಮತ್ತು 21 ರಂದು ಅಂಧ್ರ ಪ್ರದೇಶದ ಗುಂಟೂರು ವಿಜಯನಗರದಲ್ಲಿ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ಎಚ್. ಸಿ.ಎಲ್ ಫೌಂಡೇಶನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ದಕ್ಷಿಣ ವಲಯ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾರ್ಕಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವ್ರತ್ತ ಅಧ್ಯಾಪಕರಾದ ಕೃಷ್ಣ ಮೊಯ್ಲಿ ರವರು ಮಾತನಾಡಿ ಶುಭ ಹಾರೈಸಿದರು .ಕೆ. ಕೆ. ಎಂ . ಪಿ. ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಅಭಿನಂದಿಸಿ ಶುಭ ಹಾರೈಸಿದರು. ಕಾರ್ಕಳ ತಾಲೂಕು ಅಧ್ಯಕ್ಷರಾದ ಕೆ. ಬಿ ಕೀರ್ತನ್ ಕುಮಾರ್, ರವೀಂದ್ರ ರಾವ್, ಸತೀಶ್ ರಾವ್ ಅಮೋಘ ರವರ ತಂದೆ ಸುಧೀರ್ ರಾವ್ ತಾಯಿ ಜ್ಯೋತಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು ಸಂತೋಷ್ ರಾವ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.