
ಕೋಲಾರ: ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್ ಬಿಗ್ ಶಾಕ್ ನೀಡಿದ್ದು ಅದೇನೆಂದರೆ ಹಾಲು ಉತ್ಪಾದಕರಿಗೆ ದಿಢೀರನೆ 2 ರೂಪಾಯಿ ಕಡಿತ ಮಾಡಿ ಜುಲೈ 5ರ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಕೋಚಿಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ನಿನ್ನೆಯವರೆಗೂ ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿದ್ದು ಆದರೆ, ಇಂದಿನಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್ಗೆ 31.40 ರೂ ನೀಡಲು ಆದೇಶಿಸಿದೆ. ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್ಗೆ ಬರೋಬ್ಬರಿ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹ ಹಿನ್ನೆಲೆ, ಕೋಲಾರ – ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ 2.50 ಲಕ್ಷ ಲೀಟರ್ನಷ್ಟು ಹಾಲು ಹೆಚ್ಚಳವಾಗಿತ್ತು. ಆದರೆ, ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿದ್ದು, ಕೋಚಿಮುಲ್ ನಿರ್ಧಾರದಿಂದ ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.