
ಬೆಂಗಳೂರು: ಸಾವಿಗೂ ಮುನ್ನ ರೇಣುಕಾಸ್ವಾಮಿ ದಯನೀಯ ಸ್ಥಿತಿಯಲ್ಲಿದ್ದ ಫೋಟೋ ರಿವೀಲ್ ಆಗಿದ್ದು ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವ ಫೋಟೋ ಬಿಡುಗಡೆಯಾಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ಬಡಕಲು ದೇಹದ ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಾ ಮೈಮೇಲೆ ಬಟ್ಟಿಯಿಲ್ಲದೇ ಆರೋಪಿಗಳ ಮುಂದೆ, ನನ್ನನ್ನು ಬಿಟ್ಟುಬಿಡಿ ಎಂಬಂತೆ ಸಂತ್ರಸ್ತ ಅಂಗಲಾಚುತ್ತಿರುವಂತಿದೆ.
ನಟ ದರ್ಶನ್ ಮತ್ತು ಗ್ಯಾಂಗ್, ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿತ್ತು. ಈಗ ರಿವೀಲ್ ಆಗಿರುವ ಫೋಟೊದಲ್ಲಿ, ರೇಣುಕಾಸ್ವಾಮಿ ಹಿಂದೆ ಲಾರಿಗಳು ನಿಂತಿವೆ.













