
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈರಬೆಟ್ಟು ಇಲ್ಲಿ ಶಾಲೆಗೆ ದಾನಿಗಳು ನೀಡಿರುವ ವಿವಿಧ ಪರಿಕರಗಳ ವಿತರಣಾ ಕಾರ್ಯಕ್ರಮವು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಕಲ್ಯಾಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಕೋಟ್ಯಾನ್,ದಾನಿಗಳಾದ ಕಮಲಾಕ್ಷ ಕಾಮತ್, ಮಲ್ಲಮಾರ್ ವೆಲ್ ಫೇರ್ ಗ್ರೂಪಿನ ಸದಸ್ಯೆಯಾದ ಮೀನಾಕ್ಷಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್,ಜಿ.ಎನ್.ಆಂಗ್ಲಮಾಧ್ಯಮ ಶಾಲೆ ಮೂಲ್ಕಿ ಇಲ್ಲಿನ ಟ್ರಸ್ಟಿನ ಸದಸ್ಯೆಯಾಗಿರುವ ಪ್ರಜ್ಜಾ ಅವಿನಾಶ್ ಕೋಟ್ಯಾನ್, ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ಜಗದೀಶ್ ಹೆಗ್ಡೆ ,ದಿವ್ಯಾ.ಆರ್.ಭಟ್, ರಾಧಿಕಾ ಟಾಕೀಸ್ ಕಾರ್ಕಳ ಇದರ ಮಾಲೀಕರಾದ ಮನೋಹರ್, ಸಿಂಡಿಕೇಟ್ ಬ್ಯಾಂಕ್ ಆಫೀಸರ್ ಗಣೇಶ್, ಶ್ರೀ ಮತಿ ನೇಹಾ ಗಣೇಶ್,ಎಸ್.ಡಿ.ಎಮ್.ಸಿ.ಯ ಸರ್ವ ಸದಸ್ಯರು,ಶಾಲೆಯ ಶಿಕ್ಷಕರಾದ ಶಶಿಕಲಾ ಹೆಚ್ ಮತ್ತು ಗೌರವ ಶಿಕ್ಷಕಿಯಾಗಿರುವ ಸವಿತಾ,ಅಂಗನವಾಡಿ ಕಾರ್ಯಕರ್ತೆ ಸುವಾಸಿನಿ ಹಾಗೂ ಸಹಾಯಕಿ ಯಶೋಮತಿ ,ಆರೋಗ್ಯ ಇಲಾಖೆಯ ನಿಖಿತಾ ಮತ್ತು ವೀಣಾ, ಅಡುಗೆ ಸಿಬ್ಬಂದಿಯಾಗಿರುವ ಲಲಿತಾ, ಪೋಷಕರು ಹಾಗೂ ಶಾಲಾಭಿಮಾನಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕರಾಗಿರುವ ಶಶಿಕಲಾ ಶೆಟ್ಟಿ ಸ್ವಾಗತಿಸಿದರು,ಸಹಶಿಕ್ಷಕಿ ಶಾಹಿನ್ ವಂದಿಸಿದರು.ಗೌರವ ಶಿಕ್ಷಕರಾಗಿರುವ ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ದಾನಿಗಳು ನೀಡಿರುವ ಸಿಹಿತಿಂಡಿ ವಿತರಿಸಲಾಯಿತು ಹಾಗೂ ಶಾಲಾ ವತಿಯಿಂದ ಲಘ ಉಪ ಆಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.


