
ನವದೆಹಲಿ: ಇನ್ನು ಮುಂದೆ ಕೇಂದ್ರ ಸರಕಾರಿ ಉದ್ಯೋಗದಲ್ಲಿರುವ ಮಹಿಳಾ ನೌಕರರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೂ ಮಕ್ಕಳ ಆರೈಕೆಗೆ 180 ದಿನಗಳ ಕಾಲ ರಜೆ ದೊರೆಯಲಿದೆ.
ಈ ಕುರಿತು ಸಿಬ್ಬಂದಿ ತರಬೇತಿ ಇಲಾಖೆ ಪರಿಷ್ಕೃತ ನಿಯಮಗಳ ಅಧಿಸೂಚನೆ ಹೊರಡಿಸಿದ್ದು ಬಾಡಿಗೆ ತಾಯಿಯ ಜೊತೆಗೆ ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ ನಿಯೋಜಿತ ತಾಯಿ ಸರ್ಕಾರಿ ಉದ್ಯೋಗಿಯಾಗಿದ್ದರೆ 180 ದಿನಗಳ ಹೆರಿಗೆ ರಜೆಯನ್ನು ಪಡೆಯುತ್ತಾರೆ.
ಕೇಂದ್ರ ಸರ್ಕಾರವು ಕೇಂದ್ರ ನಾಗರಿಕ ಸೇವೆಗಳ ನಿಯಮಗಳ 1972 ಅನ್ನು ತಿದ್ದುಪಡಿ ಮಾಡಿದ ನಂತರ ಹೊಸ ನಿಯಮಗಳ ಪ್ರಯೋಜನವು ಕೇಂದ್ರ ನೌಕರರಿಗೆ ಲಭ್ಯವಿರುತ್ತದೆ.
ಇದರೊಂದಿಗೆ ಬಾಡಿಗೆ ತಾಯ್ತನಕ್ಕಾಗಿ ಪಿತೃತ್ವ ರಜೆಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ ನಿಯೋಜಿತ ತಂದೆಯರು ಈಗ ಮಗುವಿನ ಜನನದ ಆರು ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆ ಪಡೆಯಲು ಅರ್ಹರಾಗಿರುತ್ತಾರೆ.