26 C
Udupi
Saturday, May 2, 2026
spot_img
spot_img
HomeBlogಕೇಂದ್ರ ಸರಕಾರದಿಂದ,ದಸರಾ ಪ್ರಯುಕ್ತ ಗುಡ್ ನ್ಯೂಸ್,ಹಲವು ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ ತೆರಿಗೆ ಇಳಿಕೆ

ಕೇಂದ್ರ ಸರಕಾರದಿಂದ,ದಸರಾ ಪ್ರಯುಕ್ತ ಗುಡ್ ನ್ಯೂಸ್,ಹಲವು ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ ತೆರಿಗೆ ಇಳಿಕೆ

ನವದೆಹಲಿ: ದಸರಾ ಹಬ್ಬದ ಪ್ರಯುಕ್ತ ಕೇಂದ್ರ ಸರಕಾರ ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ ತೆರಿಗೆ ಇಳಿಕೆ ಮಾಡುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿದೆ.

ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ನೀತಿ ಜಾರಿಗೆ ಬರುತ್ತಿದ್ದು ಹಲವು ಸುಧಾರಣೆಗಳನ್ನು ಮಾಡಲಾಗಿದೆ ಈ ವಿಚಾರದ ಬಗ್ಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ನೀತಿ ಕುರಿತು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ನೀತಿ ಜಾರಿಗೆ ಬರುತಿದ್ದು ಕೇವಲ ಎರಡು ಸ್ಲ್ಯಾಬ್ ಮಾತ್ರ ಇರಲಿದೆ. ಅಂದರೆ ಶೇಕಡ ಐದರಷ್ಟು ಜಿಎಸ್‌ಟಿ ಹಾಗೂ ಶೇಕಡ 18ರಷ್ಟು ಜಿ ಎಸ್ ಟಿ. ಸಾಮಾನ್ಯ ಹಾಗೂ ಮಾಧ್ಯಮ ವರ್ಗದ ಜನರು ಬಳಕೆ ಮಾಡುವ ವಸ್ತುಗಳ ಮೇಲೆ ತೆರಿಗೆ ಶೇ. ಐದಕ್ಕೆ ಇಳಿಕೆ ಮಾಡಲಾಗುತ್ತಿದೆ. ಯು ಎಚ್ ಡಿ ಹಾಲು, ಚಪಾತಿ, ಪನ್ನೀರ್ ಇವುಗಳ ಮೇಲೆ ತೆರಿಗೆ ಪೂರ್ಣ ವಿನಾಯಿತಿ ನೀಡಲಾಗಿದೆ.

ಟಿವಿ 18 ಶೇ., ವಾಷಿಂಗ್ ಮಷೀನ್ 18 ಶೇ. ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತದೆ. ರೈತರು ಬಳಕೆ ಮಾಡುವ ವಸ್ತುಗಳ ಮೇಲೆ ತೆರಿಗೆ ಇಳಿಕೆ ಮಾಡಲಾಗುತ್ತಿದೆ. ಆರೋಗ್ಯ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಿದ್ದು 33 ಜೀವ ರಕ್ಷಕ ಔಷಧಿಗಳ ಮೇಲೆ ವಿನಾಯಿತಿ ನೀಡಲಾಗಿದೆ.

ಕಾರು, ಬೈಕ್ ಆಂಬುಲೆನ್ಸ್ ಟ್ರ್ಯಾಕ್ಸ್ ತ್ರಿಚಕ್ರ ವಾಹನಗಳು ಆಟೋಮೊಬೈಲ್ ವಸ್ತುಗಳ ಮೇಲೆ ಶೇಕಡ 18ಕ್ಕೆ ಇಳಿಕೆಯಾಗುತ್ತಿದೆ.

ಸಿಗರೇಟ್, ಗುಟ್ಕಾ, ಪಾನ್ ಮಸಾಲ, ತಂಬಾಕು ಪದಾರ್ಥಗಳ ಮೇಲೆ ಶೇಕಡ 40ರಷ್ಟು ತೆರಿಗೆ ವಿಧಿಸಲಾಗುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page