
ನವದೆಹಲಿ: ಇಂದು ಸಂಜೆ ಮೋದಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಬೆಳಗ್ಗೆ 11:30ಕ್ಕೆ ನೂತನ ಕ್ಯಾಬಿನೆಟ್ ಸದಸ್ಯರಿಗೆ ತಮ್ಮ ನಿವಾಸದಲ್ಲಿ ಚಹಾ ಕೂಟ ಆಯೋಜಿಸಿದ್ದರು.
ಈ ಸಭೆಗೆ ಯಾರನ್ನೆಲ್ಲಾ ಆಹ್ವಾನಿಸಿದ್ದರು ಎನ್ನುವುದು ಅಧಿಕೃತವಾಗಿ ತಿಳಿದು ಬಂದಿರಲಿಲ್ಲ. ಹೀಗಾಗಿ ಅಣ್ಣಾಮಲೈ ಅವರಿಗೂ ಕರೆ ಹೋಗಿದೆ ಎಂಬ ವದಂತಿ ಹರಡಿತ್ತು. ಆದರೆ ಅಂತಿಮವಾಗಿ ಮೋದಿ ನಡೆಸಿದ ಸಭೆಯಲ್ಲಿ ಅಣ್ಣಾಮಲೈ ಭಾಗಿಯಾಗಿರಲಿಲ್ಲ,ಹಾಗೂ ಭಾಜಪದ ನಿಯಮದ ಪ್ರಕಾರ ಮಂತ್ರಿ ಸ್ಥಾನ ಹಾಗೂ ರಾಜ್ಯಧ್ಯಕ್ಷ ಸ್ಥಾನ ಒಬ್ಬರೇ ನಿಭಾಯಿಸುವಂತಿಲ್ಲ,ಹಾಗಾಗಿ ಅಣ್ಣಾಮಲೈ ಯವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಹೇಳಲಾಗುತ್ತಿದೆ