
ನವದುರ್ಗ ಫ್ರೆಂಡ್ಸ್ (ರಿ.)ಕೆಮ್ಮಣ್ಣು-ನಿಟ್ಟೆ ಇವರ ಆಶ್ರಯದಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮ ಇಂದು ಕೆಮ್ಮಣ್ಣು ಮಾರ್ಗದ ಬರಿ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಮ್ಮಣ್ಣು ದೇವಸ್ಥಾನದ ಅರ್ಚಕರಾದ ಶಾಂತರಾಮ್ ಭಟ್ ನೆರೆವೇರಿಸಿದರು. ಮುಖ್ಯ ಅಥಿತಿಗಳಾಗಿ ಅರುಣ್ ಕುಮಾರ್ ನಿಟ್ಟೆ, ಜಯ ಪೂಜಾರಿ, ಸಂತೋಷ್ ಶೆಟ್ಟಿ, ಉಮೇಶ್ ಕೋಟ್ಯಾನ್, ವೆಂಕಟಕೃಷ್ಣ ಭಟ್,ಲಕ್ಷಣ ಪೂಜಾರಿ, ಸಂಘದ ಅಧ್ಯಕ್ಷ ಶೈಲೇಶ್ ಸುವರ್ಣ ಉಪಸ್ಥಿತರಿದ್ದರು. ಮಕ್ಕಳಿಗೆ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭ ಪ್ರಶಸ್ತಿ ವಿತರಣೆ ಕಾರ್ಯಕ್ರಮ ದಲ್ಲಿ ಅಥಿತಿಗಳಾಗಿ ಮಾಧವ ಬಂಗೇರ, ನಿತಿನ್ ಹೆಗ್ಡೆ, ಗೋಪಾಲ್ ಶೆಟ್ಟಿ, ಸಂತೋಷ್ ಶೆಟ್ಟಿ, ಯತೀನ್ ಶೆಟ್ಟಿ, ಆಶಿಕ್ ಬೊಂಟ್ರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಧೂಮವತಿ ದೈವಸ್ಥಾನ ಕೆಮ್ಮಣ್ಣು ಇಲ್ಲಿನ “ಕೆಮ್ಮಣ್ದ ನೇಮೋತ್ಸವ”ಧ್ವನಿ ಸುರುಳಿ ಬಿಡುಗಡೆ ನಡೆಯಿತು. ಪ್ರದೀಪ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.