
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ, ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಈಗಾಗಲೇ ಈ ಬಂದ್ ಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಸೇರಿದಂತೆ ಓಲಾ, ಉಬರ್, ಆಟೋ ಸಂಘಗಳು ಕೂಡ ಬಂದ್ಗೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದು ಮಾರ್ಚ್ 22 ರ ಶನಿವಾರದಂದು ಓಲಾ, ಉಬರ್, ಆಟೋ, ಸಾರಿಗೆ ವ್ಯವಸ್ಥೆಯನ್ನು ನಂಬಿ ರಸ್ತೆಗಿಳಿಯುವ ಮುನ್ನ ಜನರು ಯೋಚಿಸಬೇಕಾಗಿದೆ. ಅದೇ ರೀತಿ ಈ ಬಂದ್ ಬಿಸಿ ನ್ಯಾಯ ಬೆಲೆ ಅಂಗಡಿಗಳ ಮೇಲೂ ತಟ್ಟಲಿದೆ.
ಕರ್ನಾಟಕ ಬಂದ್ ಬಿಸಿ ಬ್ಯಾಂಕ್ ಗಳಿಗೆ ತಟ್ಟುವುದಿಲ್ಲವಾದರೂ ಕೂಡ ಮಾರ್ಚ್ 22 ನಾಲ್ಕನೇ ಶನಿವಾರವಾರ ಕಾರಣ ಬ್ಯಾಂಕ್ ಗಳು ತೆರೆದಿರುವುದಿಲ್ಲ. ಹೀಗಾಗಿ ಜನರು ತಮ್ಮ ಬ್ಯಾಂಕ್ ಕೆಲಸಗಳೇನಾದರೂ ಇದ್ದರೆ ಶುಕ್ರವಾರದೊಳಗೆ ಮಾಡಿ ಮುಗಿಸಬೇಕು.