
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ (SPYSS)ವತಿಯಿಂದ ಮಕ್ಕಳ ಯೋಗ ಮತ್ತು ವ್ಯಕಿತ್ವ ವಿಕಸನ ಉಚಿತ ತರಗತಿಯ ಉದ್ಘಾಟನೆಯು ಕುಕ್ಕುಂದೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಮಾತನಾಡಿದ ಭುವನೇಂದ್ರ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಯುತ ಸಂಜಯ್ ಕುಮಾರ್ ರವರು,ನಮ್ಮ ದೇಶದ ಸಂಸ್ಕೃತಿ, ಪರಂಪರೆ, ದೇಶ ಪ್ರೇಮ,ಮತ್ತು, ನಾವು ಮರೆತ ಆಚಾರ ವಿಚಾರಗಳ ಬಗ್ಗೆ ಮಾತನಾಡುತ್ತಾ, ಇಂತಹ ಶ್ರೇಷ್ಠ ಸಂಸ್ಕೃತಿ ಯನ್ನು ಮಕ್ಕಳಿಗೆ ಹೇಳಿಕೊಡುವ,ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಯೋಗದ ಜೊತೆ,ಜೊತೆಗೆ ಪಂಚಮುಖಿ ಶಿಕ್ಷಣವನ್ನು ಉಚಿತವಾಗಿ ಕಲಿಸಿ ಕೊಡುತ್ತಿರುವುದು ಶ್ಲಾಘನೀಯವೆಂದರು.ಪೋಷಕರು ಇಂತಹ ಶಿಬಿರಗಳಿಗೆ ಮಕ್ಕಳನ್ನು ಹುರಿದುಂಬಿಸಿ ಕಳಿಸಿ ಕೊಡಬೇಕೆಂದು ಕಿವಿ ಮಾತು ಕೂಡ ಹೇಳಿದರು.ಹಿರಿಯ ಶಿಕ್ಷಕರಾದ ವಿನಾಯಕ್ ಕುಡ್ವ ಅವರು ಮಕ್ಕಳ ವ್ಯಕ್ತಿತ್ವ ವಿಕಸನ ತರಗತಿಯ ಬಗ್ಗೆ ಮಾಹಿತಿ ನೀಡಿದರು. ಕುಕ್ಕುಂದೂರು ಶಾಖೆಯ ಸಂಚಾಲಕರಾದ ಶ್ರೀಯುತ ಹರೀಶ್ ನಾಯಕ್ ಅವರು ಅಧ್ಯಕ್ಷರಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಗೈದರು.
ಉದ್ಘಾಟನ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರು, ಶಿಕ್ಷಕರು, ಶಿಬಿರಾರ್ಥಿಗಳಾದ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.ಯೋಗದೊಂದಿಗೆ ಹೊಸ ಹೊಸ ಪಾಠಗಳು,ವಿವಿಧ ಆಟಗಳು, ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವಿಕೆ,ಬೌದ್ಧಿಕ್,ಈ ರೀತಿಯಾಗಿ ಇನ್ನೂ ಅನೇಕ ಚಟುವಟಿಕೆಗಳಿಂದ, ಮಕ್ಕಳಲ್ಲಿ ಹುರುಪನ್ನು ನೀಡುವ ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು,ಸ್ಥಳೀಯ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

