ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಪರಿಸರ ರಕ್ಷಣೆಯ ಮಹತ್ವ ಮತ್ತು ನಾಗರಿಕ ಕರ್ತವ್ಯದ ಜಾಗೃತಿ”

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ. ಕಾರ್ಕಳ ಇಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವಿಜ್ಞಾನ ಶಿಕ್ಷಕಿ ಲಲಿತಾರವರು ಪರಿಸರ ರಕ್ಷಣೆಯ ಮಹತ್ವ ಮತ್ತು ನಾಗರಿಕ ಕರ್ತವ್ಯದ ಜಾಗೃತಿಯನ್ನು ಮನದಟ್ಟು ಮಾಡಿದರು.ಸ್ಕೌಟ್ ಗೈಡ್ ರಾಜ್ಯ ತರಬೇತುದಾರರಾದ ಶ್ರೀಮತಿ ಸಾವಿತ್ರಿ ಯವರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಪರಿಸರ ಮಹತ್ವವನ್ನು ತಿಳಿಸುವುದರೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಸ್ವಾಗತಿಸಿದರು.ದೈಹಿಕ ಶಿಕ್ಷಕರಾದ ವೇದಾವತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿಶ್ಚಂದ್ರ ಬಾಯರಿಯವರು ವಂದಿಸಿದರು.