ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ 22- 6- 24ರಂದು 24 -25 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಸದಸ್ಯರು ಹಾಗೂ ದಾನಿಗಳು ಆದಂತಹ ಶ್ರೀ ರಘುರಾಮ ಕಾಮತ್ ಇವರು ವಹಿಸಿಕೊಂಡಿದ್ದರು ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು ಕಾರ್ಕಳದ ವಿಶ್ರಾಂತ ಲೆಕ್ಕಪರಿಶೋಧಕರು ಹಾಗೂ ದಾನಿಗಳು ಆದಂತಹ ಕೆ.ಕಮಲಾಕ್ಷಕಾಮತ್ ಇವರು ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ನಮ್ಮ ಸಾಮರ್ಥ್ಯದ ಮೇಲೆ ನಮಗೆ ಆತ್ಮವಿಶ್ವಾಸ ಹಾಗೂ ನಂಬಿಕೆ ಇದ್ದಾಗ ಮಾತ್ರ ಸಾಧನೆ ಎಂದು ಮಂತ್ರಿಮಂಡಲದ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು ಸಂಸ್ಥೆಯ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಪ್ರಕಾಶ್ ರಾವ್ ಇವರು ವಿದ್ಯಾರ್ಥಿಗಳಿಗೆ ತಮಗೆ ಸಿಕ್ಕ ವಿವಿಧ ಖಾತೆಗಳ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಿವಿ ಮಾತನ್ನು ನುಡಿದರೆ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಹರಿಪ್ರಕಾಶ್ ಶೆಟ್ಟಿ ಇವರು ಮಹಿಳಾ ಸಬಲೀಕರಣದ ಜೊತೆಗೆ ಶಿಸ್ತನ್ನು ಮೈಗೂಡಿಸಿಕೊಳ್ಳಲು ಕರೆಯನ್ನು ನೀಡಿದರು ವೇದಿಕೆಯಲ್ಲಿ ಎಸ್ ಡಿ ಎಂ ಸಿ ಹಾಗೂ ಪೋಷಕ ಸದಸ್ಯರಾದ ಜಗದೀಶ್ ಹೆಗ್ಡೆ ರಾಜೇಂದ್ರ , ಬಾಬು ಶೆಟ್ಟಿಗಾರ್, ಕಲ್ಪನಾ ಹಾಗೂ ವಿದ್ಯಾರ್ಥಿ ನಾಯಕ ಕುಮಾರ ಜೆ .ಕೆ ನೂತನ್ ಉಪಸ್ಥಿತರಿದ್ದರು.

ಶಾಲಾ ಸಂಸತ್ತಿನ ಸಭಾಪತಿಯಾದ ಕುಮಾರಿ ಅನ್ವಿತಾ ಇವರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕುಮಾರ ಜೆ.ಕೆ ನೂತನ್ ಸಹಿತ ಎಲ್ಲಾ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು ನಂತರ ಎಲ್ಲಾ ಸಂಘಗಳ ಕಾರ್ಯದರ್ಶಿಗಳು ತಮ್ಮ ಸಂಘದ ಕುರಿತಾದ ಮಾಹಿತಿ ನೀಡಿದರು ಕಾರ್ಯಕ್ರಮವನ್ನು ಕಲಾ ಶಿಕ್ಷಕಿ ಶ್ರೀಮತಿ ಪ್ರತಿಮಾ ನಾಯಕ್ ನಿರೂಪಿಸಿ ಸಂಸ್ಥೆಯ ಗಣಿತ ಶಿಕ್ಷಕಿಯಾದ ಶ್ರೀಮತಿ ಶಂಕರಿಭಟ್ ಧನ್ಯವಾದ ಗೈದರು.