
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸ ಪ್ರೌ ಶಾಲೆ ಪೆರ್ವಾಜೆ ಇಲ್ಲಿ ಪ್ರಾರಂಭೋತ್ಸವವನ್ನು ಮಾಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ಸರಕಾರದಿಂದ ನೀಡುವ ಪ್ರೋತ್ಸಾಹಕ ಯೋಜನೆಗಳಾದ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು.ಅಧ್ಯಕ್ಷ ಸ್ಥಾನದಿಂದ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯರಾಜ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಎಸ್ ಡಿ ಎಂ ಸಿ ಸದಸ್ಯರಾದ ಪ್ರಕಾಶ್ ರಾವ್, ಮತ್ತು ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿಯವರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವೇದಿಕೆಯಲ್ಲಿಎಸ್ ಡಿ ಎಂ ಸಿ ಸದಸ್ಯರಾದ ರಘುರಾಮ ಕಾಮತ್, ಆಲಿಸ್ ಲೋಬೋ, ಅಶೋಕ್ ಮಡಿವಾಳ, ನ್ಯಾಯವಾದಿ ವಿಖ್ಯಾತ್ ಜೈನ್ , ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಸ್ವಾಗತಿಸಿದರು.ಶಿಕ್ಷಕಿ ಶಂಕರಿ ಭಟ್ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಶೈಲಜಾ ಹೆಗ್ಡೆ ವಂದಿಸಿದರು.
