
ಕಾರ್ಕಳ: ದಿನಾಂಕ 07/01/2025 ರಂದು ಕಾರ್ಕಳ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಪೂಜ್ಯ ಮಾತೃಶ್ರೀಯವರಾದ ವಿಶಾಲಾಕ್ಷಿ ಅಮ್ಮನವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ವಿಶ್ವಕ್ಕೆಲ್ಲ ಸಾರಿದ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಮಾತೃಶ್ರೀಯವರ ಜನ್ಮ ದಿನಾಚರಣೆಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ಈ ದಿನದಂದು ನಮ್ಮ ಬಾಲ ಮಂದಿರದ ಮಕ್ಕಳು ತಾಯಿ ಮಗುವಿನ ಬಾಂಧವ್ಯವನ್ನು ಬಿಂಬಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸಿ, ತಮ್ಮ ತಮ್ಮ ತಾಯಂದಿರಿಗೆ ಕೊಡುವುದರ ಮೂಲಕ ಸಂಕೇತವಾಗಿ ಮಾತೃಶ್ರೀ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.



















