28.6 C
Udupi
Wednesday, June 24, 2026
spot_img
spot_img
HomeBlogಕಾರ್ಕಳ: ಶ್ರೀ ತುಳಜಾ ಭವಾನಿ ಫ್ರೆಂಡ್ಸ್ ಮುನಿಯಾಲು ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಮರಾಠಿ...

ಕಾರ್ಕಳ: ಶ್ರೀ ತುಳಜಾ ಭವಾನಿ ಫ್ರೆಂಡ್ಸ್ ಮುನಿಯಾಲು ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಮರಾಠಿ ಸಮಾಜ ಬಾಂಧವರಿಗಾಗಿ,

ಜೂನ್ 28ರಂದು ‘ಏಕ್ ದಿಸ್ ಗಾದಂತ್ ಖೇಲಿಯ ’ ಕಾರ್ಯಕ್ರಮ

ಕಾರ್ಕಳ: ಶ್ರೀ ತುಳಜಾ ಭವಾನಿ ಫ್ರೆಂಡ್ಸ್ ಮುನಿಯಾಲು ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಮರಾಠಿ ಸಮಾಜ ಬಾಂಧವರಿಗಾಗಿ ಜೂನ್ 28ರಂದು ‘ಏಕ್ ದಿಸ್ ಗಾದಂತ್ ಖೇಲಿಯ ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುನಿಯಾಲಿನ ಶ್ರೀ ದುರ್ಗಾದೇವಿ ಹತ್ತು ಸಮಸ್ತರ ಕಟ್ಟೆ ಆವರಣದಲ್ಲಿ ಬೆಳಿಗ್ಗೆ 8.30ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಇದರ ಅಂಗವಾಗಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಪುರುಷರ ವಿಭಾಗದಲ್ಲಿ 100 ಮೀ. ಓಟ, ಕಂಬಳ ಓಟ, ಉಪ್ಪು ಮೂಟೆ, ಹಾಳೆ ಓಟ, ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಮಹಿಳೆಯರಿಗಾಗಿ 50 ಮೀ. ಓಟ, ಉಪ್ಪು ಮೂಟೆ, ಹಿಮ್ಮುಖ ಓಟ, ಹಾಳೆ ಓಟ, ಕಂಬಳ ಓಟ, ಲಿಂಬು-ಚಮಚ ಹಾಗೂ ಬಾಲ್ ಪಾಸಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳ ವಿಭಾಗದಲ್ಲಿಯೂ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಭಾಗವಹಿಸುವ ಸ್ಪರ್ಧಿಗಳು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕಿದ್ದು, ತಂಡಗಳು ಬೆಳಿಗ್ಗೆ 8.30ಕ್ಕೆ ಸ್ಥಳದಲ್ಲಿ ಹಾಜರಾಗಬೇಕು ಎಂದು ಆಯೋಜಕರು ತಿಳಿಸಿದ್ದಾರೆ. 10ನೇ ತರಗತಿವರೆಗಿನ ಮಕ್ಕಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.
ನಾಗರಾಜ್ ನಾಯ್ಕ್ : 9844055305
ಶ್ರೀಶ ನಾಯ್ಕ್: 8861605244
ಅಭಿಷೇಕ್ ನಾಯ್ಕ್: 9741828579

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page