ಗೌರವಾಧ್ಯಕ್ಷರಾಗಿ ಪ್ರಶಾಂತ್ ಶೆಣೈ,ಅಧ್ಯಕ್ಷರಾಗಿ ಅಜಿತ್ ಕುಮಾರ್

ಕಾರ್ಕಳ, ಜು. 31: ಕಾರ್ಕಳದ ಬಾಲಾಜಿ ಇನ್ ಹೋಟೆಲ್ ನಲ್ಲಿ ಇಂದು (31-07-2026) ನಡೆದ ಕಾರ್ಕಳ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆಯಲ್ಲಿ 2026–27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಪ್ರಶಾಂತ್ ಶೆಣೈ (Balaji Mobiles), ಅಧ್ಯಕ್ಷರಾಗಿ ಅಜಿತ್ ಕುಮಾರ್ (AJ Mobiles, ಕಾರ್ಕಳ) ಅವರು ಸತತ ಎರಡನೇ ಬಾರಿಗೆ ಸರ್ವಾನುಮತದಿಂದ ಮರುಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸಂತೋಷ್ ಕಾತ್ಯಾಯಿನಿ ಹಾಗೂ ಖಜಾಂಚಿಯಾಗಿ ಹಮೀದ್ (Cell Zone) ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಅಭಿನಂದಿಸಿದ ಸದಸ್ಯರು, ಸಂಘದ ಅಭಿವೃದ್ಧಿ, ಮೊಬೈಲ್ ವ್ಯಾಪಾರಿಗಳ ಹಿತಾಸಕ್ತಿ, ಸದಸ್ಯರ ನಡುವಿನ ಬಾಂಧವ್ಯ ಹಾಗೂ ಏಕತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳು, ಸದಸ್ಯರ ಕಲ್ಯಾಣ ಹಾಗೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.























































