
ಕಾರ್ಕಳ: ನಿರಂತರವಾಗಿ ಸುರಿಯುತ್ತಿರುವ ಗಾಳಿ-ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಪರೀಶಿಲನೆಗೆ ಸಹಾಯಕ ಕಮೀಶನರರಾದ ಶ್ರೀ ಮಹೇಶಚಂದ್ರ ಕೆ. ರವರು ಜುಲೈ 31 ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು, ಕಾರ್ಕಳ ( ಕಸಬಾ ), ಸಾಣೂರು ಗ್ರಾಮಗಳಿಗೆ ಭೇಟಿ ನೀಡಿ, ಪಹಣಿ ಮತ್ತು ಆಧಾರ್ ಜೋಡಣೆ, ಲ್ಯಾಂಡ್ ಬೀಟ್ ಪ್ರಗತಿ ಪರಿಶೀಲನೆ ನಡೆಸಿದರು. ಅಲ್ಲದೇ, ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿದ ಹುಡ್ಕೋ ಕಾಲೋನಿ, ಪೊಸನೊಟ್ಟು ಪ್ರದೇಶಗಳಿಗೆ ಹಾಗೂ ಅಯ್ಯಪ್ಪ ನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರರಾದ ನರಸಪ್ಪ ತಹಶೀಲ್ದಾರ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು

ಕುಕ್ಕುಂದೂರು ವಿ ಎ ಕಛೇರಿಗೆ ಭೇಟಿ

ಕುಕ್ಕುಂದೂರು ಹುಡ್ಕೋ ಕಾಲೋನಿ ಭೇಟಿ

ಕುಕ್ಕುಂದೂರು ಗ್ರಾಮ ಪೊಸನೊಟ್ಟು ಭೇಟಿ

ಕುಕ್ಕುಂದೂರು ಗ್ರಾಮ ಅಯ್ಯಪ್ಪ ನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ













