ಸಮ್ಮೇಳನಾಧ್ಯಕ್ಷರಾಗಿ,
ಪ್ರೊ. ಕೆ.ಗುಣಪಾಲ ಕಡಂಬ
ಡಿ. 6 ಶುಕ್ರವಾರ, ಸರಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು

ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೊ. ಕೆ ಗುಣ ಪಾಲ್ ಕಡಂಬ ಇವರ ಅಧ್ಯಕ್ಷತೆಯಲ್ಲಿ, ಡಿಸೆಂಬರ್ 6ರಂದು ಶುಕ್ರವಾರ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಇಲ್ಲಿ ನಡೆಯಲಿದೆ.
ಪೂರ್ವಾಹ್ನ 8ಕ್ಕೆ, ಶ್ರೀ ಶಾಂತಿರಾಜ ಜೈನ್ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಂದ ರಾಷ್ಟ್ರ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಇವರಿಂದ ಪರಿಷತ್ ಧ್ವಜಾರೋಹಣ ನಡೆಯಲಿದೆ. 8:30ಕ್ಕೆ ಪುರಂ ಮೆರವಣಿಗೆ, ಪೂರ್ವಾಹ್ನ 10 ಗಂಟೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಇವರಿಂದ ಉದ್ಘಾಟನೆ, ಮಾಜಿ ಮುಖ್ಯಮಂತ್ರಿಗಳಾದ ಡಾ. ವೀರಪ್ಪ ಮೊಯ್ಲಿ ಇವರಿಂದ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕರಾದ ವಿ. ಸುನಿಲ್ ಕುಮಾರ್ ಇವರು ನಡೆಸಲಿದ್ದು, ಆಶಯದ ನುಡಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ನೀಡಲಿದ್ದಾರೆ. ಪುಸ್ತಕ ಮಳಿಗೆಯ ಉದ್ಘಾಟನೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ ಕೆ ವಿಜಯಕುಮಾರ್ ನಡೆಸಲಿದ್ದಾರೆ.

ವಿಶೇಷ ಸನ್ಮಾನಿತರು:
ಸಹ ಶಿಕ್ಷಕರು ರೆಂಜಾಳ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ವಿನಾಯಕ ನಾಯ್ಕ್,
ಜಾಗತಿಕ ದಾಖಲೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ
ಕಂಬಳ ಕೋಣಗಳ ಯಜಮಾನ ಶ್ರೀಕಾಂತ್ ಭಟ್ ನಂದಳಿಕೆ
ಜಾಗತಿಕ ದಾಖಲೆಗೈದ ಕಂಬಳ ಕೋಣಗಳ ಯಜಮಾನ ಮಿಜಾರು ಶಕ್ತಿಪ್ರಸಾದ್ ಶೆಟ್ಟಿ
ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವಿನಮ್ರ ಆಚಾರ್ಯ

ವಿಶೇಷ ಪ್ರಶಸ್ತಿ ಪ್ರಧಾನ
ಡಾ. ಸುಧಾಕರ ಶೆಟ್ಟಿ ಅಧ್ಯಕ್ಷರು ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ, ಕುಕ್ಕುಂದೂರು ಇವರ ಪ್ರಾಯೋಜಕತ್ವದಲ್ಲಿ: ದಿ .ಪ್ರೊ. ಎಂ. ರಾಮಚಂದ್ರ ಸಂಸ್ಕರಣೆಯ ಉಡುಪಿ ಜಿಲ್ಲಾ ಯುವ ಸಾಹಿತಿ ಪ್ರಶಸ್ತಿ, ದಿ. ಗೋಪಾಲ ಭಂಡಾರಿ ಇವರ ಸ್ಮರಣಾರ್ಥ ,ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡ ಉತ್ತಮ ಸಂಘ ಸಂಸ್ಥೆ ಪ್ರಶಸ್ತಿ
ಡಾ. ರವೀಂದ್ರ ತಟ್ಟಿ ಬಜಗೋಳಿ ಇವರ ಪ್ರಾಯೋಜಕತ್ವದಲ್ಲಿ: ಕರುನಾಡ ಸಿರಿ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆ

ಸಾಧಕ ಸನ್ಮಾನಿತರು
ವೈಜ್ಞಾನಿಕ ಕ್ಷೇತ್ರ: ಜನಾರ್ದನ ಇಡ್ಯಾ
ಕೃಷಿ ಕ್ಷೇತ್ರ: ಧರಣೇಂದ್ರ ಜೈನ್, ಶಿರ್ಲಾಲು
ಜಾನಪದ ಕ್ಷೇತ್ರ,: ಸುಶೀಲ ಪಾಣರ, ಶಿರ್ಲಾಲು
ನಾಟಿ ವೈದ್ಯ: ವಿಠಲ ಶೆಟ್ಟಿ, ಶಿರ್ಲಾಲು
ಸಂಕೀರ್ಣ: ಸಿಲ್ವೆಸ್ಟರ್ ಡಿಮೆಲ್ಲೋ
ಸಂಘಟನೆ: ಮೊಹಮ್ಮದ್ ಖಾನ್
ಪತ್ರಿಕಾ ರಂಗ: ಶರೀಫ್
ಸಾಹಿತ್ಯ: ರೇಷ್ಮಾ ಶೆಟ್ಟಿ ಗೊರೂರು
ಸಮಾಜ ಸೇವೆ: ಅವಿನಾಶ್ ಜಿ ಶೆಟ್ಟಿ
ಸಾಹಿತ್ಯ: ಕ್ರಿಯೇಟಿವ್ ಪುಸ್ತಕ ಮನೆ

ಸಮಾರೋಪ ಸಮಾರಂಭ
ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯ ಅಧ್ಯಕ್ಷರಾದ ಡಾಕ್ಟರ್ ಎಂ ಮೋಹನ್ ಆಳ್ವ, ಸಮಾರೋಪ ಭಾಷಣ ಸ.ಪ.ಪೂ ಕಾಲೇಜು ಶಿರ್ಲಾಲು ಇದರ ಪ್ರಾಚಾರ್ಯರಾದ ಬೇಬಿಕೆ ಈಶ್ವರ ಮಂಗಳ, ಸಮಾರೋಪದ ಅಧ್ಯಕ್ಷತೆಯನ್ನು ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪ್ರತಿಸ್ಪಂದನೆ ಸಮ್ಮೇಳನಾಧ್ಯಕ್ಷರಾದ ಪ್ರೊ. ಕೆ ಗುಣಪಾಲ ಕಡಂಬ ನೀಡಲಿದ್ದು, ಸಮಾರೋಪ ಸಮಾರಂಭ ಇಳಿ ಹಗಲು 3 ಯಿಂದ ನಡೆಯಲಿದೆ ಸಂಜೆ 6:30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಎಸ್ ಎಲ್ ಸಿ ಪರಿಚಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 125 ಪೂರ್ಣ ಅಂಕ ಪಡೆದ ಹೆಮ್ಮೆಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡ:
ಸರಕಾರಿ ಪದವ ಪೂರ್ವ ಕಾಲೇಜು, ಶಿರ್ಲಾಲು ಪ್ರೌಢಶಾಲೆ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು ಪದವಿ ಪೂರ್ವ ವಿಭಾಗ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಡಿ ಕೆರ್ವಶೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ಮುಂಡ್ಲಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಡಾರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡಿಬೆಟ್ಟು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಮೈನ್



















