ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮತ್ತು “ಆಟಿಡೊಂಜಿ ಬಂಟ ಕೂಟ”ವಿಷಯದ ಬಗ್ಗೆ ಚರ್ಚೆ

ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಮಾಸಿಕ ಸಭೆಯು ಇಂದು ಜುಲೈ 7 ರಂದು ನಡೆಯಿತು.
ಸಭೆಯಲ್ಲಿ , ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ ಕಾರ್ಕಳ, ಯುವ ಬಂಟರ ಸಂಘ ಕಾರ್ಕಳ ಸಹಭಾಗಿತ್ವದಲ್ಲಿ ಪೆರ್ವಾಜೆ ಮಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಲಿರುವ ಆಟಿಡೊಂಜಿ ಕೂಟ ಮತ್ತು ಎಸ್ ಎಸ್ ಎಲ್ ಸಿ, ಪಿಯುಸಿ ಪಾಸಾದ ಶೇ. 90 ಕ್ಕಿಂತ ಹೆಚ್ಚಿನ ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ, ಕಾರ್ಕಳ ಮಹಿಳಾ ಬಂಟ ಸಂಘದ ಅಧ್ಯಕ್ಷರಾದ ಸವಿತಾ ವಿಜಯ ಶೆಟ್ಟಿ, ಕಾರ್ಯದರ್ಶಿಯಾದ ಸುನಿತಾ ಸಿರಿಯಣ್ಣ ಶೆಟ್ಟಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.