
ಕಾರ್ಕಳ:ತಾಲೂಕಿನ ಅಮರ ಜ್ಯೋತಿ ಆಸ್ಪತ್ರೆ ಬಳಿಯ ನಿವಾಸಿ ಅನಂತ ಪದ್ಮನಾಭ ಭಟ್ ಬಿನ್ ಶ್ರೀನಿವಾಸ್ ಭಟ್ ರವರ ವಾಸದ ಮನೆಗೆ ಜೂ.27 ರ 11 ಗಂಟೆಗೆ ಬೀಸಿದ ಭಾರಿ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು,ರೂ 20000 ಅಂದಾಜು ನಷ್ಟ ಎಂದು ಅಂದಾಜಿಸಾಗಿದೆ.

ಕಣಜಾರು ಗ್ರಾಮದ ವನಜ ರವರ ವಾಸದ ಮನೆಗೆ ಇಂದಿನ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ,ರೂ 10,000 ಅಂದಾಜು ನಷ್ಟ ಎನ್ನಲಾಗುತ್ತಿದೆ

ಕಣಜಾರು ಗ್ರಾಮದ ವಾರಿಜಾ ನಾಯಕ್ ರವರ ವಾಸದ ಮನೆಗೆ ಮರ ಬಿದ್ದು ಹಾನಿಯಾಗಿದ್ದು,10000 ಅಂದಾಜು ನಷ್ಟ

ಕಣಂಜಾರು:ಭಾರಿ ಗಾಳಿ ಮಳೆಗೆ ಶಾಂತಾ ನಾಯ್ಕ ಕೋಂ ಬಾಬು ನಾಯ್ಕ ಎಂಬವರ ಕೃಷಿ ತೋಟದಲ್ಲಿ 45 ಅಡಿಕೆ ಮರ ಹಾಗೂ1ಮಾವಿನ ಮರ ಹಾನಿಯಾಗಿದೆ ಹಾನಿಯ ಅಂದಾಜು ವೆಚ್ಚ 15000/-

ಸುಂದರ ಪೂಜಾರಿ ಬಿಬನ್ ಸೋಮಪ್ಪ ಪೂಜಾರಿ ಗೇರು ಮರ ಮನೆಗೆ ಬಿದ್ದು ಭಾಗಶ ಹಾನಿ ಅಂದಾಜು 20000/- ನಷ್ಟ
