
ಕಾರ್ಕಳ : ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ 3 ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಬಂಗಾರದ ಪದಕ ವಿಜೇತೆ ಕು.ನಿಧಿ ಯು. ಆಚಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತಾನಾಡಿದ ಅವರು ವಿದ್ಯಾರ್ಥಿಗಳ ಮಾನಸಿಕ ಮತ್ತುದೈಹಿಕ ಬೆಳವಣಿಗೆಯಲ್ಲಿ ಯೋಗದ ಪಾತ್ರ ಮಹತ್ವದ್ದು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಪ್ರಾತ್ಯಕ್ಷಿಕೆಯ ಮೂಲಕ ಯೋಗಾಸನ ನಡೆಸಿಕೊಟ್ಟರು.
ಇದೇ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರು, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ಸ್.ಮಿಥುನ್ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರಂತಿ ಶಕುಂತಲಾ ಎಂ ಸುವರ್ಣ, ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ, ಶ್ರೀಮತಿ ಉಷಾ ರಾವ್.ಯು ಹಾಗೂ ಪ್ರೌಢಶಾಲಾ
ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಜಯಶೀಲ್, ಪ್ರೌಢಶಾಲಾ ಅಕಾಡೆಮಿಕ್ ಅಡ್ವೈಸರ್ಸ ಶಾರದಾ ಅಂಬರೀಶ್ ಮತ್ತು ದೈಹಿಕ ಶಿಕ್ಷಕರಾದ ಶ್ರೀಮತಿ ರೇಷ್ಮಾ ಸಾಲಿಸ್ ಹಾಗೂ ಕಿರಣ್ ಕುಮಾರ್
ಉಪಸ್ಥಿತರಿದ್ದರು. ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ದಿವ್ಯ ರಾವ್ ಯು ನಿರೂಪಿಸಿ ವಂದಿಸಿದರು.