
ಕಾರ್ಕಳ: ಜೀಪು ಹಾಗೂ ರಿಕ್ಷಾ ಅಪಘಾತಗೊಂಡು ಐವರು ಗಾಯಗೊಂಡ ಘಟನೆ ಅಜೆಕಾರು ಸಮೀಪದ ಕೈಕಂಬ ಮಥುರಾ ಪಟ್ಲ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಹರೀಶ್(38 ವರ್ಷ ),ಲಲಿತಾ(62 ವರ್ಷ), ಪ್ರೇಮಾ(58 ವರ್ಷ), ಶಾರದಾ(52 ವರ್ಷ ) ಗೀತಾ(39 ವರ್ಷ ) ಎಂಬವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು 108 ಆಂಬುಲೆನ್ಸ್ ನಲ್ಲಿ ಕಾರ್ಕಳದ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜೆಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.