23.6 C
Udupi
Wednesday, February 18, 2026
spot_img
spot_img
HomeBlogಕಾರ್ಕಳ: ಚಿನ್ನದಂಗಡಿ ಕಳ್ಳತನ ಪ್ರಕರಣ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು

ಕಾರ್ಕಳ: ಚಿನ್ನದಂಗಡಿ ಕಳ್ಳತನ ಪ್ರಕರಣ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು

ಕಾರ್ಕಳ ಮುಖ್ಯರಸ್ತೆಯಲ್ಲಿರುವ ಪ್ರಣವ್ ಜ್ಯುವೆಲ್ಲರಿ ಎಂಬ ಆಭರಣದ ಅಂಗಡಿಗೆ ಡಿ.27 ಬಂದ ಕಳ್ಳ ಚಿನ್ನದ ಕಿವಿಯೋಲೆ ತೋರಿಸುವಂತೆ ಕೇಳಿದ್ದ. ಆಗ ಶಾಪ್‌ನಲ್ಲಿದ್ದ ರೇಣುಕಾ ಅವರು ಗಂಡ ಬರುತ್ತಾರೆ ಅರ್ಧ ಗಂಟೆ ಬಿಟ್ಟು ಬನ್ನಿ ಎಂದಿದ್ದರು. ಆದರೂ ಆರೋಪಿ ಅಂಗಡಿಯಲ್ಲಿಯೇ ಸ್ವಲ್ಪ ಹೊತ್ತು ನಿಂತಿದ್ದು, ಬಳಿಕ ಬೆಳ್ಳಿಯ ಉಂಗುರವನ್ನು ತೋರಿಸುವಂತೆ ಕೇಳಿದ್ದಾನೆ. ಅದರಂತೆ ರೇಣುಕಾ ಅವರು ಬೆಳ್ಳಿಯ ಉಂಗುರವನ್ನು ತೋರಿಸುತ್ತಿದ್ದಾಗ ಖದೀಮ ಅಂಗಡಿಯ ಶೋಕೇಸ್ ಗ್ಲಾಸ್‌ ಮೇಲೆ ಇಟ್ಟಿದ್ದ ಕಿವಿಯ ಜುಮುಕಿ -3 ಜೊತೆ, ಚಿನ್ನದ ಉಂಗುರ-3 ಇದ್ದ ಪೊಟ್ಟಣವನ್ನು ಕಳ್ಳತನ ಮಾಡಿ ಪರಾರಿಯಗಿದ್ದಾನೆ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣಕ್ಕೆ‌ ಸಂಬಂಧಿಸಿ ಆರೋಪಿಯನ್ನು ಕಾರ್ಕಳ ‌ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಖ್ಯಾತ ಸರಗಳ್ಳ ಧಾರವಾಡದ ಜನ್ನತ್ ನಗರದ ನಿವಾಸಿ ಮೊಹಮ್ಮದ್ ಅಲಿಖಾನ್ ಅಲಿಯಾಸ್ ಇರಾನಿ ಅವನಿ (32) ಬಂಧಿತ ಆರೋಪಿ. ಆರೋಪಿಯಿಂದ 1.78 ಲಕ್ಷ ರೂ.ಮೌಲ್ಯದ 26 ಗ್ರಾಂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ಅವರ ನೇತೃತ್ವದಲ್ಲಿ ಪಿಎಸ್ ಐಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್, ಸಿಬಂದಿಗಳಾದ ಗೋಪಾಲ್, ಸಂತೋಷ್, ಶ್ರೀನಿವಾಸ್, ಸದಾನಂದ್, ದರ್ಶನ್ ಅವರನ್ನು ಒಳಗೋಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page