ಮೂರು ದಿನಗಳ ಉಚಿತ ಚಲನಚಿತ್ರ ಪ್ರದರ್ಶನ

ಕಾರ್ಕಳ ಚಿತ್ರೋತ್ಸವ ಅಮೃತವರ್ಷಿಣಿ 2024 ಮೂರು ದಿನಗಳ ಉಚಿತ ಚಲನಚಿತ್ರ ಪ್ರದರ್ಶನ
ರಂಗ ಸಂಸ್ಕೃತಿ ಕಾರ್ಕಳ ಬೆಳ್ಳಿ ಮಂಡಲ ಕಾರ್ಕಳ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಸಂಯೋಜಿತ ಮೂರು ದಿನಗಳ ಕಾರ್ಕಳ ಚಿತ್ರೋತ್ಸವ ಅಮೃತವರ್ಷಿಣಿ 2024 ಕಾರ್ಯಕ್ರಮವು ಜುಲೈ 9 10 11 ರಂದು ಪ್ರಕಾಶ್ ಹೋಟೆಲ್ ಕಾರ್ಕಳದ ಉತ್ಸವ ಸಭಾಂಗಣದಲ್ಲಿ ನಡೆಯಲಿದೆ.
ಈ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಪುರಸ್ಕಾರ ಪಡೆದ ಅನನ್ಯ ಕಾಸರವಳ್ಳಿಯಶರ ನಿರ್ದೇಶನದ ಹರಿಕಥಾ ಪ್ರಸಂಗ ಚಂಪಾ ಶೆಟ್ಟಿ ನಿರ್ದೇಶನದ ಕೋಳಿ ಹೆಸ್ರು ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಸಿನಿಮಾಗಳ ಉಚಿತ ಪ್ರದರ್ಶನ ನಡೆಯಲಿದೆ. ಪ್ರದರ್ಶನದ ಸಮಯ ಪ್ರತೀ ದಿನ ಸಂಜೆ 6 ಕ್ಕೆ ಪ್ರಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಮನೋಹರವರು ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಡಾ. ಮಂಜುನಾಥ ಕಿಣಿ ಖ್ಯಾತ ವೈದ್ಯರು , ಸುಧೀರ್ ಶ್ಯಾನ್ ಭೋಗ್ ಚಲನಚಿತ್ರರಂಗ ನಿರ್ದೇಶಕ, ಪೂರ್ಣಿಮಾ ಶೆಣೈ ಮುಖ್ಯ ಶಿಕ್ಷಕರು ಗುರುಕುಲ ಮಾಳ, ಹರಿಪ್ರಕಾಶ್ ಶೆಟ್ಟಿ ಉದ್ಯಮಿಗಳು ಹೊಟೇಲ್ ಪ್ರಕಾಶ್ ಕಾರ್ಕಳ ,ಡಾ ಮಂಜುನಾಥ ಕೋಟ್ಯಾನ್ ಪ್ರಾಂಶುಪಾಲರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಕೃಷ್ಣ ಮೊಯಿಲಿ ಖ್ಯಾತ ವಾಸ್ತು ತಜ್ಞರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಶ್ರೀ ರಾಜೇಂದ್ರ ಭಟ್ ಕೆ ರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರು ಭಾಗವಹಿಸಲಿದ್ದಾರೆ ಎಂದು ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷ ಎಸ್ ನಿತ್ಯಾನಂದ ಪೈ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.