
ಕಾರ್ಕಳ ಬಜಗೋಳಿ ಹೆದ್ದಾರಿ ಕಲ್ಪಿಸುವ ರಸ್ತೆ ದಾನಶಾಲೆ ಗೊಮ್ಮಟ ಬೆಟ್ಟದ ಬಳಿ ಓಮ್ನಿ ಹಾಗೂ ಕಾರು ಅಪಘಾತ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳು ವನ್ನು ವಾಹನದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುವನ್ನು ಮೂಡಬಿದಿರೆಯ ಸಂದೇಶ್ (35) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಓಮ್ನಿ ಕಾರಿನ ಬಾಗಿಲು ತೆರೆಯಲಾಗದೇ ಗಾಯಾಳು ವಾಹನದಲ್ಲಿ ಸಿಲುಕಿಕೊಂಡಿದ್ದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಜಯಮೂಲ್ಯ, ಸುರೇಶ್, ನಿತ್ಯಾನಂದ, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



















