
ಕ್ರಿಸ್ತ ರಾಯ ಚಚ್೯ ಗುರುಗಳಾದ ಅತೀ ವಂದನೀಯ|ಫಾ|ಕ್ಲೆಮೆಂಟ್ ಮಸ್ಕರೆನ್ಹಸ್ ಮತ್ತು ಕುಟುಂಬ ಆಯೋಗ ಸದಸ್ಯರ ಮುಂದಾಳತ್ವದಲ್ಲಿ ಜೂನ್ 17ತಾರಿಕಲ್ಲಿ ಹಿರಿಯರ ದಿನ ಆಚರಿಸಲಾಯಿತು.
ಬೆಳಿಗ್ಗೆ 10 ಕ್ಕೆ ಪಾಪ ನಿವೇದನೆಯೊಂದಿಗೆ ಆರಂಭಿಸಿ 10.30 ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಚಚ್೯ ರೆಕ್ಟರ್ ವಂ|ಫಾ|ವಲೇರಿಯನ್ ಮೆನ್ಡೊನ್ಸಾ ಇವರು ಪೂಜೆ ಬಲಿದಾನ ಅಪಿ೯ಸಿದರು. ಚಚ್೯ ಫಾದರ್ ವಂ|ಫಾ| ಕ್ಲೆಮೆಂಟ್ ಮಸ್ಕರೇನ್ಹಾಸ್, ಫಾ|ವಿಲಿಯಂ ಮಥಾಯಸ್ ಹಾಗೂ ಫಾ|ವಿಜಿತ್ ಮಥಾಯಸ್ ಇವರು ಸಹ ಬಲಿದಾನ ಅಪಿ೯ಸಿದರು.ಪೂಜಾ ಅಪ೯ಣೆಯ ನಂತರ ಹಿರಿಯರಿಗೆ ಅಭಿನಂದಿಸಿ,ವೇದಿಕೆಯಲ್ಲಿ ಚಚ್೯ ಗುರುಗಳಾದ ವಂ|ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್, ಫಾ|ವಲೇರಿಯನ್ ಮೆನ್ಡೊನ್ಸಾ, ಫಾ|ವಿಲಿಯಂ ಮಥಾಯಸ್, ಫಾ|ವಿಜಿತ್ ಮಥಾಯಸ್, ಚಚ್೯ ಮಂಡಳಿ ಉಪಾಧ್ಯಕ್ಷರಾದ ಮಾನ್ಯ ಶ್ರೀ ನೇವಿಲ್ ಡಿ’ಸಿಲ್ವ, ಮುಖ್ಯ ಅತಿಥಿಗಳಾಗಿ ಶ್ರೀ ರಾಫೆಯಲ್ ಡಿ’ಸೋಜ ಹಾಗೂ ಶ್ರೀಮತಿ ಎಲ್ಸಿ ಡಿ’ಸೋಜ, ಕಾಯ೯ದಶಿ೯ ಶ್ರೀಮತಿ ವಿನಿತಾ ಡಿ’ಮೆಲ್ಲೊ, 20ಆಯೋಗ ಸಂಚಾಲಕ ಮಾನ್ಯ ಶ್ರೀ ಆಂಟನಿ ಆರಾನ್ಹ ಉಪಸ್ಥಿತರಿದ್ದರು.
ಪ್ರಾಥ೯ನ ಗೀತೆಯೊಂದಿಗೆ ಕಾಯ೯ಕ್ರಮ ಆರಂಭಿಸಿದರು. ಶ್ರೀ ರಫಾಯಲ್ ಮತ್ತು ಶ್ರೀಮತಿ ಎಲ್ಸಿ ಡಿ’ಸೋಜ ಇವರು ಚಚ್೯ಗೆ ಕೊಟ್ಟ ಸೇವೆಗಳಿಗೆ ಶೊಲ್,ಫಲ, ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಶ್ರೀಮತಿ ಶರಿಟಾ ನೊರೊನ್ಹಾ ಮುಖ್ಯ ಅತಿಥಿಗಳ ಪರಿಚಯಿಸಿದರು. ಆಯೋಗದ ಸದಸ್ಯರು ಪ್ರಾಯಸ್ಥರಿಗೊಸ್ಕರ ಆಟೋಟ ಆಯೋಜಿಸಿದ್ದರು.
60 ವಷ೯ ಮೇಲ್ಪಟ್ಟ ಪ್ರಾಯವುಳ್ಳವರು ಸುಮಾರು 180 ಜನ ಹಜರಿದ್ದರು. ಈ ಕಾಯ೯ಕ್ರಮಕ್ಕೆ ಸಹಾಯಾರ್ಥ ನೀಡಿದವರಿಗೆ ಗುಲಾಬಿಗಿಡ ಕೊಟ್ಟು ಗೌರವಿಸಿದರು. ಶ್ರೀಮತಿ ಗ್ರೇಸಿಯಾ ಡಿ’ಸೋಜ ಕಾಯೆ೯ ನಿವಾ೯ಹಿಸಿದರು. ಚಚ್೯ ಸದಸ್ಯರೆಲ್ಲರೂ ಒಟ್ಟಾಗಿ ರುಚಿಕರವಾದ ಊಟ ಬಡಿಸಿ ಕಾಯ೯ಕ್ರಮ ಚಂದಗಾಣಿಸಿದರು